ತೋಟದಿಂದ ರಸ್ತೆ ದಾಟುತ್ತಿದ್ದ ಹೆಬ್ಬಾವಿನ ತಲೆ ಮೇಲೆ ಹರಿದ ವಾಹನ

ತೋಟದಿಂದ ರಸ್ತೆ ದಾಟುತ್ತಿದ್ದ ಹೆಬ್ಬಾವಿನ ತಲೆ ಮೇಲೆ ಹರಿದ ವಾಹನ

ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೈಲಾಪುರ ಗ್ರಾಮದಲ್ಲಿ ಶುಕ್ರವಾರ  ಬೆಳಿಗ್ಗಿನ ಜಾವ ತೋಟದಿಂದ ರಸ್ತೆ ದಾಟುವಾಗ ವಾಹನವೊಂದು ತಲೆ ಮೇಲೆ ಹರಿದು ವಾಹನಕ್ಕೆ ಸಿಲುಕಿ ಹೆಬ್ಬಾವು ಸಾವನ್ನಪ್ಪಿರುವ ಘಟನೆ ನಡೆದಿದೆ.ಸ್ಥಳಕ್ಕೆ ತಿತಿಮತಿ ವಲಯದ ಚೆನ್ನಂಗಿ ಶಾಖೆಯ ಉಪ ವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ ಮತ್ತು ಆರ್. ಆರ್. ಟಿ. ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲ ನಡೆಸಿದರು.