ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೂಡಿಗೆ ಎ.ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಸಾಧನೆ
ಕುಶಾಲನಗರ: ಬುಧವಾರ ಶ್ರೀ ರಾಮ ಯುವಕ ಸಂಘ ಜನತಾ ಕಾಲೋನಿ ಇವರ ವತಿಯಿಂದ ಶ್ರೀ ಗೌರಿ ಗಣೇಶೋತ್ಸವದ ಪ್ರಯಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಿಂದ ಸುಮಾರು 12ಕ್ಕೂ ಅಧಿಕ ನೃತ್ಯ ತಂಡಗಳು ಭಾಗವಹಿಸಿ, ಕೂಡಿಗೆಯ ಎ.ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳು ಅತ್ಯುತ್ತಮ ನೃತ್ಯ ಪ್ರದರ್ಶನವನ್ನು ನೀಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದ ಎ.ಕ್ರಿಯೇಟಿವ್ ವಿದ್ಯಾರ್ಥಿಗಳ ನೃತ್ಯ ಪ್ರಕಾರವನ್ನು ವೀಕ್ಷಿಸಿದ ತೀರ್ಪುಗಾರರು ಇವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮತ್ತು ನೆರೆದಿದ್ದ ಜನರ ಮೈ ರೋಮಾಂಚನ ಗೊಳಿಸುವ ನೃತ್ಯವನ್ನು ಮಾಡಿರುವ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಶ್ರೀ ರಾಮ ಯುವಕ ಸಂಘದ ಆಯೋಜಕರು, ತೀರ್ಪುಗಾರರು ಹಾಗೂ ಗಣ್ಯರು ನೃತ್ಯ ಪಟುಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ವಿತರಿಸಿ ಅಭಿನಂದಿಸಿದರು. ಹಾಗೆಯೇ ವಿಜೇತರಾದ ವಿದ್ಯಾರ್ಥಿಗಳಿಗೆ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಪೋಷಕರು ಮತ್ತು ನೆರೆದಿದ್ದ ಜನರು ಪ್ರೋತ್ಸಾಹಿಸಿ ಅಭಿನಂದಿಸಿದರು.