ಕೂಡುಮಂಗಳೂರಿನಲ್ಲಿ ಅಪಘಾತ: ಸವಾರ ಪತಿ ದುರ್ಮರಣ, ಪತ್ನಿಗೆ ಗಂಭೀರ

Feb 17, 2026 - 20:38
Feb 17, 2026 - 22:19
 0  2k
ಕೂಡುಮಂಗಳೂರಿನಲ್ಲಿ ಅಪಘಾತ: ಸವಾರ ಪತಿ ದುರ್ಮರಣ, ಪತ್ನಿಗೆ ಗಂಭೀರ

ಕುಶಾಲನಗರ, ಫೆ 17: ಕೂಡುಮಂಗಳೂರು ಗ್ರಾಮದ ದೊಡ್ಡಮ್ಮ ತಾಯಿ ದೇವಾಲಯ ಮುಂಭಾಗ ಬೈಕ್ ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ನಡೆದಿದೆ.

ಹೆಬ್ಬಾಲೆಯಮರೂರು ಗ್ರಾಮದ ನಟೇಶ್ (31) ಮೃತ ದುರ್ದೈವಿ. ಬೈಕ್‌ ಹಿಂಬದಿಯಿದ್ದ ಮೃತರ ಪತ್ನಿ ದಿವ್ಯ (30) ಅವರ ಎಡಗಾಲು ಮುರಿದಿದೆ.

ಬೈಕ್‌ ತಿರುಗಿಸುತ್ತಿದ್ದ ಸಂದರ್ಭ ಹಿಂಬದಿಯಿಂದ ಬಂದ ಗೂಡ್ಸ್ ವಾಹನ ಡಿಕ್ಕಿಯಾಗಿದೆ. ಕೂಡಲೆ ಗಾಯಾಳುಗಳನ್ನು ಕುಶಾಲನಗರ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದ ನಟೇಶ್ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಪೊಲೀಸ್‌ ಠಾಣೆ ಮುಂಭಾಗ ಪೊಲೀಸರನ್ನು ಗಮನಿಸಿದ ಸವಾರ ಬೈಕ್‌ ವಾಪಾಸ್‌ ತಿರುಗಿಸಿದ ಸಂದರ್ಭ ಅಶೋಕ್ ಲೈಲಾಂಡ್ ಹಿಂದಿನಿಂದ ಡಿಕ್ಕಿಯಾಗಿದೆ ಎಂದು ಗಾಯಾಳುಗಳನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಿದ ಮಟನ್ ಜಬೀವುಲ್ಲಾ ಅವರು ಮಾಹಿತಿ ನೀಡಿದ್ದಾರೆ.

ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 6
Wow Wow 0