ಅಂಬಟ್ಟಿ ವಿಜಯ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ಅಂಬಟ್ಟಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ

Apr 27, 2026 - 11:22
 0  127
ಅಂಬಟ್ಟಿ ವಿಜಯ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ಅಂಬಟ್ಟಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ

 ವಿರಾಜಪೇಟೆ: ಪರಿಸರ ಕಾಳಜಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು ನಿಟ್ಟಿನಲ್ಲಿ ಧಾರ್ಮಿಕ ಸೇವಾ ಸಮಿತಿಯೊಂದು ಗ್ರಾಮ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಯಿತು. ವಿರಾಜಪೇಟೆ ಬಾಳುಗೋಡು ಅಂಬಟ್ಟಿ ಗ್ರಾಮದ ವಿಜಯ ವಿಘ್ನೇಶ್ವರ ಸೇವಾ ಸಮಿತಿ ವತಿಯಿಂದ ಅಂಬಟ್ಟಿ ಗ್ರಾಮದಲ್ಲಿ ಒಂದು ದಿನದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿತು.

ಸಮಿತಿಯ ಮನವಿಯ ಮೇರೆಗೆ ಬಿಟ್ಟಂಗಾಲ ಗ್ರಾಮ ಪಂಚಾಯತಿ ಕೈಜೋಡಿಸಿದ್ದು. ಸಮಿತಿ ಯ ಸದಸ್ಯರು ಕಾವೇರಿ ಕಾಲೇಜು ಅನತಿ ದೂರದ ತಿರುವು ಭಾಗದಿಂದ ಚೆನಂಡ ಗಣಪತಿ ಅವರ ಮನೆಯ ವರೆಗೆ ಮುಖ್ಯ ರಸ್ತೆ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್, ಮತ್ತು ನಿರುಪಯುಕ್ತ ವಸ್ತುಗಳ ಹೆಕ್ಕಿ ಸ್ವಚ್ಚಗೊಳಿಸಿತು.

ಈ ಸಂದರ್ಭದಲ್ಲಿ ಸಮಿತಿ ಅದ್ಯಕ್ಷರಾದ ಎನ್.ಸಿ. ವಿಜಯ ಕುಮಾರ್, ಉಪಾಧ್ಯಕ್ಷ ಆಟ್ರಂಗಡ ವಿಶ್ವನಾಥ್, ಕಾರ್ಯದರ್ಶಿ ಪ್ರಮೋದ್, ಹೇಮಾ ವಕೀಲರಾದ ಅಮೃತ್, ಚೇನಂಡ ಸುರೇಶ್, ಗಣೇಶ್, ಮಂಜುನಾಥ್ ಹರಿಣಿ ,ಶರಿ, ಬಿಬಿನ್ ಹಾಗೂ ಬಿಟ್ಟಂಗಾಲ ಗ್ರಾಮ ಪಂಚಾಯತಿ ಯ ಸಿಬ್ಬಂದಿಗಳು ಹಾಜರಿದ್ದರು. 

ವರದಿ;ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0