ಸಮಯ ಪ್ರಜ್ಞೆ ಮೆರೆದ ಆಂಬ್ಯುಲೆನ್ಸ್ ಚಾಲಕನಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಸನ್ಮಾನ
admincoorgdaily
ಮಡಿಕೇರಿ:ಇತ್ತೀಚೆಗೆ ಮಡಿಕೇರಿ ಜಿಲ್ಲಾಸ್ಪತ್ರೆಯಿಂದ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ತೀವ್ರ ನಿಗಾ ಘಟಕದಲ್ಲಿದ್ದ ಬಾಣಂತಿ ಮಹಿಳೆಯನ್ನು ಸರ್ಕಾರಿ ಆಂಬುಲೆನ್ಸ್ ನಲ್ಲಿ ಸಾಗಿಸುತಿದ್ದ ಸಂದರ್ಭ ಇನ್ನೇನು ಆಸ್ಪತ್ರೆಗೆ ತಲುಪುವ ದಾರಿಯಲ್ಲಿ ದುರದೃಷ್ಟವಶಾತ್ ವಾಹನದ ಬ್ರೇಕ್ ಡೌನ್ ಆದ ಸಂದರ್ಭದಲ್ಲಿ ತನ್ನ ಚಾಣಕ್ಷತನದಿಂದ ವಾಹನವನ್ನು ನಿಯಂತ್ರಿಸಿ ಆಂಬ್ಯುಲೆನ್ಸ್ ನಲ್ಲಿದ್ದವರಿಗೆ ಯಾವುದೇ ತೊಂದರೆ ಆಗದೆ ಆಸ್ಪತ್ರೆಗೆ ತಲುಪಿಸಿ ಸಾಹಸ ಮೆರೆದು ಸುದ್ದಿಯಾಗಿದ್ದ ಚಾಲಕ ಕಿಶೋರ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ರವರು ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಾ.ಮಂತರ್ ಗೌಡ ರವರು ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಭಿನಂದಿಸಿ ಗೌರವಿಸಿದರು.