ಕೊಡ್ಲಿಪೇಟೆಯಲ್ಲಿ ಸಿನಿಮೀಯ ರೀತಿಯಲ್ಲಿ ವ್ಯಕ್ತಿಯ ಕೊಲೆಗೆ ‌ಯತ್ನ!

ಕೊಡ್ಲಿಪೇಟೆಯಲ್ಲಿ ಸಿನಿಮೀಯ ರೀತಿಯಲ್ಲಿ ವ್ಯಕ್ತಿಯ ಕೊಲೆಗೆ ‌ಯತ್ನ!

ಕೊಡ್ಲಿಪೇಟೆ : ಹ್ಯಾಂಡ್‌ಪೋಸ್ಟ್ ಎಸ್ಸಾರ್ ಪೆಟ್ರೋಲ್ ಬಂಕ್ ಮಾಲೀಕ, ಕೊಡ್ಲಿಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಜೆ.ಕೆ.ತೇಜಕುಮಾರ್ ಅವರ ಮೇಲೆ ಕಾರಿಗೆ ಲಾರಿ ಡಿಕ್ಕಿ ಪಡಿಸಿ ಕೊಲೆ ಮಾಡುವ ಪ್ರಯತ್ನ ನಡೆದಿದೆ ಎಂದು ತೇಜಕುಮಾರ್ ಅವರು ಶನಿವಾರಸಂತೆ ಠಾಣೆಯಲ್ಲಿ ಇಬ್ಬರು ವಿರುದ್ಧ ದೂರು ನೀಡಲಾಗಿದೆ.

ದೊಡ್ಡಕುಂದ ಗ್ರಾಮದ ಕಿರಿಕೊಡ್ಲಿ ರಸ್ತೆಯಲ್ಲಿ ತೇಜಕುಮಾರ್ ಮನೆಗೆ ತನ್ನ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಲಾರಿಯಿಂದ ಕಾರಿಗೆ ಡಿಕ್ಕಿಪಡಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಲಾರಿ ಗುದ್ದಿದ ರಭಸಕ್ಕೆ ಕಾರಿಗೆ ಹಾನಿಯಾಗಿದೆ. ಪುನಃ ಲಾರಿಯನ್ನು ಹಿಂದೆ ಚಲಿಸಿ ಹಿಂಬದಿಯಿಂದ ಡಿಕ್ಕಿ ಪಡಿಸಲು ಪ್ರಯತ್ನಿಸುವಾಗ ಈ ರಸ್ತೆಯಲ್ಲಿ ಬರುತ್ತಿದ್ದ ನೀರುಗುಂದ ಗ್ರಾಮದ ಬೈಕ್ ಮೇಲೆ ಕೂಡ ಹಾನಿಯಾಗಿದೆ. ಬೈಕ್ ನಲ್ಲಿದ್ದ ಇಬ್ಬರು ಸವಾರರು ಪ್ರಾಣಾಯಾದಿಂದ‌ ಪಾರಾಗಿದ್ದಾರೆ.

ಲಾರಿ ಕೆಳಭಾಗದಲ್ಲಿ ಬೈಕ್ ಸಿಕ್ಕಿಕೊಂಡ ಕಾರಣ ಲಾರಿ ರಸ್ತೆ ಬದಿಯಲ್ಲಿದ್ದ ಗುಂಡಿಗೆ ಇಳಿದಿದೆ.ಲಾರಿ ಚಲಾಯಿಸಲಾಗದೆ ಲಾರಿ ಬಿಟ್ಟು ಚಾಲಕ ಮತ್ತು ಮತ್ತೊಬ್ಬ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆರಗನಹಳ್ಳಿ ಗ್ರಾಮದ ಕೆ.ಆರ್.ರಮೇಶ್ ಮಾಲೀಕತ್ವದ ಲಾರಿ ಎಂದು ತಿಳಿದು ಬಂದಿದೆ. ಕಾರಿನ ಏರ್ ಬ್ಯಾಗ್ ಸ್ವಯಂ ತೆರೆದ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ.

ತೇಜಕುಮಾರ್ ಅವರ ಕಾಲಿಗೆ ಗಾಯವಾಗೆ. ವೈಯುಕ್ತಿಕ ದ್ವೇಷದಿಂದ ನನ್ನ ಮೇಲೆ ರಮೇಶ್ ಮತ್ತು ಜೆಸಿಬಿ ದಿವಾಕರ್ ನಿಂದ ನಡೆದ ಕೃತ್ಯ ಎಂದು ತೇಜಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರಿಂದ ಶೋಧ‌ ಕಾರ್ಯ ನಡೆಯುತ್ತಿದೆ. ತೇಜಕುಮಾರ್ ಅವರು ದೂರು ನೀಡಿರುವ ಇಬ್ಬರು, ಎರಡು ತಿಂಗಳ ಹಿಂದೆ ಪೆಟ್ರೋಲ್ ಬಂಕ್ ಸಮೀಪವಿರುವ ಕ್ಯಾಂಟಝನ್ ಮುಂಭಾಗ ಕತ್ತಿ ಬೀಸಿ ಕೊಲೆಗೆ ಪ್ರಯತ್ನಿಸಿದ ಕೃತ್ಯ ನಡೆದಿತ್ತು. ಶನಿವಾರಸಂತೆ ಠಾಣೆ ಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದರೆ ಇವತ್ತು ಈ ರೀತಿಯಲ್ಲಿ ನನಗೆ ತೊಂದರೆ ಯಾಗುತ್ತಿರಲಿಲ್ಲ‌ ಎಂದು ತೇಜಕುಮಾರ್ ಆರೋಪಿಸಿದ್ದಾರೆ. ರಮೇಶ್ ಹಾಗೂ ದಿವಾಕರ್ ಅವರ ಮೇಲೆ (BNS),2023(U\S-109,3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ