ಬೇಂಗೂರು ಕೊಡವ ಸಮಾಜದಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನಕ್ಕೆ ಶಾಸಕ ಪೊನ್ನಣ್ಣ ಅವರಿಗೆ ಮನವಿ
admincoorgdaily
ಮಡಿಕೇರಿ: ತಾಲೂಕಿನ ಬೇಂಗ್ ನಾಡ್( ಚೇರಂಬಾಣೆ) ಕೊಡವ ಸಮಾಜದ ಪದಾಧಿಕಾರಿಗಳು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರನ್ನು ಭೇಟಿ ಮಾಡಿ ಸಮಾಜದ ಕಟ್ಟಡದ ಅನುದಾನಕ್ಕೆ ಬೇಡಿಕೆ ಸಲ್ಲಿಸಿದರು.
ಸುಮಾರು 4 ಕೋಟಿ ವೆಚ್ಚದಲ್ಲಿ ಬೇಂಗ್ ನಾಡ್ ಕೊಡವ ಸಮಾಜದ ಕಟ್ಟಡ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು ಸುಸಜ್ಜಿತ ಭವನ ನಿರ್ಮಾಣಕ್ಕೆ ಸಿದ್ದತೆ ನಡೆಸಿದ್ದು ಸರ್ಕಾರದಿಂದ ಅನದಾನ ಒದಗಿಸುವಂತೆ ಶಾಸಕರಲ್ಲಿ ಕೋರಲಾಯಿತು. ಶಾಸಕ ಪೊನ್ನಣ್ಣ ನವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಶಾಸಕರನ್ನು ಭೇಟಿ ಮಾಡಿದ ನಿಯೋಗದಲ್ಲಿ ಅಧ್ಯಕ್ಷರಾದ ಬಾಚಿರಣಿಯಂಡ ಗಣಪತಿ, ಕಾರ್ಯದರ್ಶಿ ಕೇಕಡ ಮೊಣ್ಣಪ್ಪ, ಪದಾಧಿಕಾರಿಗಳಾದ ನಾಪಂಡ ಪ್ರತಾಪ್,ಕುಂಚೆಟ್ಟಿರ ಅಜಿತ್ ಪೆಮ್ಮಯ್ಯ, ಕಲ್ಮಾಡಂಡ ಗಣೇಶ,ವಾಸು ಉತ್ತಯ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.