ಬಿಟ್ಟಂಗಾಲ:ಹುಲಿ ದಾಳಿಗೆ ಹಸು ಬಲಿ
ವಿರಾಜಪೇಟೆ:ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಬಾಡಗ ಗ್ರಾಮದ ತೀತಿಮಾಡ ಬೋಪಣ್ಣ ಅಯ್ಯಪ್ಪರವರು ಗದ್ದೆಯಲ್ಲಿ ಮೇಯಲು ಬಿಟ್ಟಿದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಸ್ವಲ್ಪ ಭಾಗವನ್ನು ತಿಂದು ಹಾಕಿದೆ. ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸು ಕಾಣೆಯಾಗಿತ್ತು.ಶನಿವಾರದಿಂದ ಹುಡುಕಾಡಿದಾಗ ಇಂದು ಪಕ್ಕದ ತೋಟದಲ್ಲಿ ಹಸುವಿನ ಕಳೇಬರ ಪತ್ತೆಯಾಗಿದೆ. ಹುಲಿ ಹಾವಳಿಯಿಂದಾಗಿ ಸುತ್ತ ಮುತ್ತಲಿನ ಜನರು ಕೂಡ ಭಯದಲ್ಲೇ ಕಾಲ ಕಳೆಯುವಂತಾಗಿದೆ, ಜನ ಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಕೋರಿಕೊಂಡಿದ್ದಾರೆ.