ಕರಿಮೆಣಸು ಕಳ್ಳತನ ಪ್ರಕರಣ:ನಾಲ್ವರ ಬಂಧನ

ಕರಿಮೆಣಸು ಕಳ್ಳತನ ಪ್ರಕರಣ:ನಾಲ್ವರ ಬಂಧನ

ಸೋಮವಾರಪೇಟೆ: ಠಾಣೆಯಲ್ಲಿ ದಾಖಲಾಗಿದ್ದ ಕಾಳು ಮೆಣಸು ಕಳ್ಳತನದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಜನ ಆರೋಪಿಗಳನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿ ಅವರಿಂದ 2.4 ಲಕ್ಷ ಮೌಲ್ಯದ 360 ಕೆ.ಜಿ ಕಾಳು ಮೆಣಸು ಮತ್ತು ಕೃತ್ಯಕ್ಕೆ ಬಳಸಿದ್ದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಸೆಪ್ಟೆಂಬರ್ 29 ಮತ್ತು ಅಕ್ಟೋಬರ್ 26 ರಂದು ಕರಿಮೆಣಸು ಕಳ್ಳತನ ನಡೆದಿತ್ತು.

 ಆರೋಪಿಗಳಾದ ಸೋಮವಾರಪೇಟೆ ವೆಂಕಟೇಶ್ವರ ಬ್ಲಾಕ್ ನ ವಾಸಿ ಸುಮಂತ್, ಕಿಬೆಟ್ಟ ಗ್ರಾಮದ ಕೀರ್ತಿ, ಕೊಣನೂರು ಗ್ರಾಮದ ಮಣಿಕಂಠ, ಕೆ. ಆರ್. ಪೇಟೆಯ ಸಚಿನ್ ರವರುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.