ಹಾರಂಗಿ ಅಣೆಕಟ್ಟೆ ವೀಕ್ಷಿಸಿ ವಾಪಾಸಾಗುತ್ತಿದ್ದ ಬಸ್ಸ್ ಅಪಘಾತ: ಬಸ್ಸ್ ನಲ್ಲಿದ್ದ ವಿದ್ಯಾರ್ಥಿಗಳಿಗೆ ಗಾಯ

ಹಾರಂಗಿ ಅಣೆಕಟ್ಟೆ ವೀಕ್ಷಿಸಿ ವಾಪಾಸಾಗುತ್ತಿದ್ದ ಬಸ್ಸ್ ಅಪಘಾತ:  ಬಸ್ಸ್ ನಲ್ಲಿದ್ದ ವಿದ್ಯಾರ್ಥಿಗಳಿಗೆ ಗಾಯ

ಕುಶಾಲನಗರ: ಹಾರಂಗಿ ಅಣೆಕಟ್ಟೆ ವೀಕ್ಷಿಸಿ ವಾಪಾಸಾಗುತ್ತಿದ್ದ ಬಸ್ ರಸ್ತೆ ಅವ್ಯವಸ್ಥೆಯಿಂದ ಅಪಘಾತಕ್ಕೆ ಒಳಗಾದ ಘಟನೆ ನಡೆದಿದೆ‌. ಕಾವೇರಿ‌ ನೀರಾವರಿ ನಿಗಮದ ವತಿಯಿಂದ ಅಣೆಕಟ್ಟೆ ಮುಂಭಾಗ ಅನತಿ ದೂರದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಭ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗುಂಡಿ ಕಾರಣ ದಿಢೀರ್ ಬ್ರೇಕ್ ಹಾಕಿದ ಬಸ್ ಹಿಂದೆ ಬರುತ್ತಿದ್ದ ಮತ್ತೊಂದು ಬಸ್ ನಿಯಂತ್ರಣ ತಪ್ಪಿ ಅಪಘಾತ ತಪ್ಪಿಸಲು ರಸ್ತೆ ಬದಿಗೆ ವಾಲಿದೆ. ಅದೃಷ್ಟವಶಾತ್ ರಸ್ತೆ ಬದಿ ದಿಬ್ಬವಿದ್ದ ಕಾರಣ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗುವುದು ತಪ್ಪಿದೆ‌. ಘಟನೆಯಲ್ಲಿ ಬಸ್ ನಲ್ಲಿದ್ದ ವಿದ್ಯಾರ್ಥಿಗಳಿಗೆ,  ಗಾಯಗಳುಂಟಾಗಿದೆ. ಕಾಮಗಾರಿ ವಿಳಂಬ ಮಾಡುತ್ತಿರುವ ನೀರಾವರಿ ನಿಗಮದ ಅಧಿಕಾರಿ ವಿರುದ್ದ ಪ್ರತಿಭಟನೆಗೆ ಗ್ರಾಮಸ್ಥರು ಸಿದ್ದರಾಗುತ್ತಿದ್ದಾರೆ.