ಏ.16 ರಿಂದ ನಿವೇಶನಕ್ಕೆ ಒತ್ತಾಯಿಸಿ ಸಿಐಟಿಯುನಿಂದ ಮಾಲ್ದಾರೆಯಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ

Apr 14, 2026 - 19:39
 0  104
ಏ.16 ರಿಂದ ನಿವೇಶನಕ್ಕೆ ಒತ್ತಾಯಿಸಿ  ಸಿಐಟಿಯುನಿಂದ ಮಾಲ್ದಾರೆಯಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ

ಸಿದ್ದಾಪುರ:ನಿವೇಶನ ರಹಿತರಿಗೆ ಸೂರು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಏ.16ರಂದು ಮಾಲ್ದಾರೆ ಗ್ರಾಮ ಪಂಚಾಯತ್ ಕಛೇರಿಯ ಮುಂಭಾಗದಲ್ಲಿ ಒಂದುದಿನದ ಪ್ರತಿಭಟನೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಕೊಡಗು ಜಿಲ್ಲಾ ಜಂಡ್ರಲ್ ವರ್ಕರ್ಸ್ ಯುನಿಯನ್(ಸಿಐಟಿಯು) ನ ಜಿಲ್ಲಾಕಾರ್ಯದರ್ಶಿ ಮಹೇದೇವ್ ತಿಳಿಸಿದ್ದಾರೆ.

ನಗರದ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಲೆಮಾರುಗಳಿಂದ ತೋಟದ ಲೖನ್ ಮನೆಗಳಲ್ಲಿ, ಬಾಡಿಗೆ ಮನೆಗಳಲ್ಲಿ ವಾಸಿಸುವ ಬಡಕೂಲಿ ಕಾರ್ಮಿಕರಿಗೆ ಸ್ವಂತ ಸೂರು ಕಲ್ಪಸಿಕೊಡುವಲ್ಲಿ ಸರಕಾರ ವಿಫಲವಾಗಿದೆ ಎಂದರು.

ಮುಂದುವರಿದು ಮಾತನಾಡಿದ ಅವರು ಜನ ಪ್ರತಿನಿಧಿಗಳು ಚುನಾವಣೆ ಸಂಧರ್ಭದ ನೀಡಿದ ಅಶ್ವಾಸನೆಳನ್ನು ಹಿಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಸರಕಾರಿ ಭೂಮಿಯನ್ನು ಒತ್ತುವರಿದಾರರಿಗೆ ವರ್ಷಕ್ಕೆ ಎಕರೆಗೆ 3ಸಾವಿರ ರೂನಂತೆ 35 ವರ್ಷಕ್ಕೆ ಭೋಗ್ಯಕ್ಕೆ ನೀಡುವಪ್ರಸ್ಥಾಪ ವನ್ನು ಅಂಗಿಕರಿಸಿದ್ದು ಹಿಂದಿನ ಬಿಜೆಪಿ ಸರಕಾರ ಜಾರಿಗೆ ತರಲು ಉದ್ದೇಶಿಸಿದ ಈ ಕಾಯಿದೆಯನ್ನು ಅಂದು ವಿರೋಧಿಸಿದ ಕಾಂಗ್ರೆಸ್ ಪಕ್ಷ 5ವರ್ಷ ಹೆಚ್ಚಿಗೆ ಮಾಡಿ ಮೂಲಕ ಸರ್ಕಾರ, ಬಡವರ ನಿವೇಶನದ ಕನಸ್ಸಿಗೆ ತಣ್ಣಿರೆರಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಈ ಭಾಗದ ಎಸ್ಟೇಟ್ ನಲ್ಲಿ ಸಾಕಷ್ಟು ಸಾರಿ ಜಾಗ ಇದ್ದು, ಕಂದಾಯ ಇಲಾಖಾಧಿಕಾರಿಗಳು ಮಾಲೀಕರಿಂದ ಹಣನಪಡೆದು ಅವರಿಗೆ ಖಾತೆಗೆ ಮಾಡಿಸಿದ್ದು ಬಡಕೂಲಿಕಾರ್ಮಿಕರಿಗೆ ಅನ್ಯಮಾಡಲಾಗಿದೆ ಎಂದು ಆರೋಪಿಸಿದ ಅವರು ಕೂಡಲೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಉದ್ದೆಯಿಂದ ವಜಗೊಳಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಡಳಿತಕ್ಕೆ ನಿವೇಶನ ಕೋರಿ ಎಷ್ಟೇ ಮನವಿ ಸಲ್ಲಿಸಿದರು ಮೌನವಹಿಸಿದ್ದು 16ರಂದು ಹಮ್ಮಿಕೊಡಿರುವ ಒಂದು ದಿನದ ಹೋರಾಟಕ್ಕೆ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು ಆಗಮಿಸಬೇಕು ಬಡ ಜನತೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಎ. ಸಿ. ಸಾಬು ಮಾತನಾಡಿ, ಅಮೇರಿಕಾ ಇರಾನ್ ನಡುವೆ ನಡೆಯುತ್ತಿರುವ ಯುದ್ದದಿಂದ ಜಿಲ್ಲೆಯ ವರ್ತಕರು ತಮಗೆ ತೋಚುವರೀತಿಯಲ್ಲಿ ಬೆಲೆ ಏರಿಕೆ ಮಾಡುತ್ತಿದ್ದು ಇದರಿಂದ ಬಡಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೆ ಮಧ್ಯ ಪ್ರವೇಶ ಮಾಡಿ ನಡೆಯುತ್ತಿರುವ ಹಗಲು ದರೋಡೆಗೆ ಕಡಿವಾಣ ಹಾಕಬೇಕು ಎಂದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0