ಕೊಡಗಿನ ಕೆಂಬಟ್ಟಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸು: ಸಿಎಂ ಸಿದ್ದರಾಮಯ್ಯ ಭರವಸೆ
ಬೆಂಗಳೂರು: ಕೊಡಗಿನ ಕೆಂಬಟ್ಟಿ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಇಂದು ಗೃಹ ಕಛೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರ ನೇತೃತ್ವದಲ್ಲಿ ಕೆಂಬಟ್ಟಿ ಸಮುದಾಯದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದರು .
ಕೆಂಬಟ್ಟಿ ಜನಾಂಗವು ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಉಪಜಾತಿಯ ಪಟ್ಟಿಯಲ್ಲಿ ಕೆಂಬಟ್ಟಿ ಜಾತಿಯೆಂದು ನಮೂದಿಸಲು ಮನವಿ ಸಲ್ಲಿಸಿದರು. ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಿ ಇದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರದ ಕಾರಣ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರುಗಳಾದ ಶ್ರೀ ಭೋಸರಾಜು, ಬೈರತಿ ಸುರೇಶ್, ಶಿವರಾಜ್ ತಂಗಡಗಿ, ಹಾಗೂ ಕೊಡಗು ಕೆಂಬಟ್ಟಿ ಸಮಾಜದ ಅಧ್ಯಕ್ಷರು ಮೊಳ್ಳೆಕುಟ್ಟಂಡ ದಿನು ಬೋಜಪ್ಪ,ಮುಖಂಡರುಗಳಾದ ಗೋವು ಕುಟ್ಟಡ ಅರುಣ್, ಬಿಲ್ಲಿರಿಕುಟ್ಟಡ ಅದರ್ಶ್ ಉತ್ತಪ್ಪ, ಚಟ್ಟಕುಟ್ಟಡ ಅನಂತ್ ಸುಬ್ಬಯ್ಯ, ಚಟ್ಟಕುಟ್ಟಡ ಕಾರ್ತಿಕ್ ಮೊಣ್ಟಪ್ಪ, ದೋಣಕುಟ್ಟಡ ಮಿಲನ್ ಮಂಜಪ್ಪ, ದೋಣಕುಟ್ಟಡ ವಿಜಯ್, ಯಾರಕುಟ್ಟಡ ನವೀನ್ ಸಾಬು, ಚಿಮ್ಮಿಕುಟ್ಟಡ ದರ್ಶನ್ ಮಾದಪ್ಪ, ತಂಬಕುಟ್ಟಡ ಸುಬ್ರಮಣಿ, ಬಣ್ಣಕುಟ್ಟಡ ಜಗದೀಶ್ ಅಪ್ಪಯ್ಯ, ಬೋಮ್ಮಕುಟ್ಟಡ ರವಿ ಸುಬ್ರಮಣಿ, ದೋಣಕುಟ್ಟಡ ಭೀಮಯ್ಯ, ಕೊಟ್ಟಕುಟ್ಟಡ ಭೀಮಣ್ಣಿ, ತಂಬಕುಟ್ಟಡ ಪೂವಪ್ಪ, ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಹಾಜರಿದ್ದರು.