ಸಿಪಿಎಲ್ ಕ್ರಿಕೆಟ್: ಮಡಿಕೇರಿಯ ಆರ್ಚ್ ಏಂಜಲ್ ತಂಡಕ್ಕೆ ಚಾಂಪಿಯನ್ ಪಟ್ಟ

Apr 14, 2026 - 13:22
 0  190
ಸಿಪಿಎಲ್ ಕ್ರಿಕೆಟ್: ಮಡಿಕೇರಿಯ ಆರ್ಚ್ ಏಂಜಲ್ ತಂಡಕ್ಕೆ ಚಾಂಪಿಯನ್ ಪಟ್ಟ
Winners & runner's

ಸಿದ್ದಾಪುರ; ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಆಯೋಜನೆಗೊಂಡಿದ್ದ ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೇರಿಯ ಆರ್ಚ್ ಏಂಜಲ್ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ರೋಚಕ ಅಂತಿಮ ಪಂದ್ಯದಲ್ಲಿ ಮಡಿಕೇರಿಯ ನ್ಯೂ ಸ್ಟಾರ್ ತಂಡ ಉತ್ತಮ ಪೈಪೋಟಿ ನೀಡಿದರೂ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

ಪೊನ್ನಂಪೇಟೆಯ ಅಪೋಲ್ಸ ತಂಡ ತೃತೀಯ ಸ್ಥಾನ ಪಡೆದರೆ, ಆತಿಥೇಯ ಸಿದ್ದಾಪುರದ ಟ್ರಿನಿಟಿ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

 ವೈಯಕ್ತಿಕ ಪ್ರಶಸ್ತಿಗಳ ವಿಭಾಗದಲ್ಲಿ ಗೋಪಾಲಪುರದ ಲೆಜೆಂಡ್ XI ತಂಡ ‘ಬೆಸ್ಟ್ ಟೀಮ್’ ಗೌರವಕ್ಕೆ ಪಾತ್ರವಾಯಿತು. ಜೋಜೋ ಅವರು ‘ಮ್ಯಾನ್ ಆಫ್ ದ ಸೀರೀಸ್’ ಹಾಗೂ ‘ಬೆಸ್ಟ್ ಬ್ಯಾಟ್ಸ್‌ಮನ್’ ಪ್ರಶಸ್ತಿಗಳನ್ನು ಪಡೆದು ಮಿಂಚಿದರು.

 ಡೆನ್ನಿ ಅವರಿಗೆ ‘ಬೆಸ್ಟ್ ಬೌಲರ್’ ಪ್ರಶಸ್ತಿ ಲಭಿಸಿದರೆ, ಜೋಸ್ (ಗೋಪಾಲಪುರ) ‘ಬೆಸ್ಟ್ ಫೀಲ್ಡರ್’ ಗೌರವ ಪಡೆದರು. ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಕ್ಕಿ ಅವರು ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿ ತಮ್ಮದಾಗಿಸಿಕೊಂಡರು.

 ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿರಾಜಪೇಟೆಯ ಧರ್ಮಗುರು ಜೇಮ್ಸ್ ಮಾತನಾಡಿ, ಇಂತಹ ಕ್ರೀಡಾಕೂಟಗಳು ಕ್ರೈಸ್ತ ಸಮುದಾಯದ ಯುವಜನರನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸಿ, ಒಗ್ಗಟ್ಟಿನ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಸಮಿತಿಯನ್ನು ಅವರು ಅಭಿನಂದಿಸಿದರು.

ವೀರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ. ಜಾನ್ಸನ್ ಮಾತನಾಡಿ, ಪ್ರೀಮಿಯರ್ ಲೀಗ್ ಮಾದರಿಯ ಕ್ರೀಡಾಕೂಟಗಳನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಸಮುದಾಯದ ಏಕತೆ ಮತ್ತಷ್ಟು ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟರು.

 ಕಾರ್ಯಕ್ರಮದಲ್ಲಿ ಸಿಪಿಎಲ್ ಅಧ್ಯಕ್ಷ ಜಾರ್ಜ್, ಸಿಜೆ ಬಿಲ್ಡ್‌ವೇರ್ ಅನಿಲ್, ದಾನಿಗಳಾದ ಶಾಲು ಸಿಕ್ವೆರಾ, ನಿವೃತ್ತ ಶಿಕ್ಷಕಿ ಮೋಳಿ, ಸಾಬು ವರ್ಗೀಸ್, ಎ.ಜೆ. ಥೋಮಸ್, ಕುರಿಯನ್, ಡೊಮಿನೋಸ್ ಸಂಘದ ಶೌಕತ್, ಜಿಮ್ಮಿ ಸಿಕ್ವೆರಾ, ಟೋಮಿ ಥೋಮಸ್ ಸೇರಿದಂತೆ ಅನಿಲ್, ಜೋಯ್, ವಿಜೇಶ್, ಟಿ.ಪಿ. ಅನೀಸ್, ಮಶ್ವಿನ್ ಲೋಬೊ, ರಂಜಿತ್, ಅಗಸ್ಟಿನ್ (ಕುಶಾಲನಗರ), ಫ್ರಾನ್ಸಿಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 ಇದೇ ಸಂದರ್ಭದಲ್ಲಿ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅನುಷಾ ಎಂ.ಜಿ, ಚರಿಷ್ಮಾ ಜಾನ್ಸನ್, ಸಿ.ಬಿ. ಫೌಲ್, ಸಿದ್ದಾಪುರ ವರದಿಗಾರ ಅಂತೋಣಿ, ಸೈಜಾನ್ ಪೀಟರ್, ಆಶಿಕ್ ಕ್ರಿಸ್ಟಿ, ಕ್ವಿಂಟನ್ ಕೆನಿನ್, ಅಂಟೋನಿ ಡಿಸೋಜಾ, ಬಿಬಿನ್ ಸೆಬಾಸ್ಟಿಯನ್, ಜಿಮ್ಮಿ ಸಿಕ್ವೆರಾ, ಅರುಣ್ ಹಾಗೂ ತೋಮಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಂದ್ಯಾವಳಿಯು ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತ ಯಶಸ್ವಿಯಾಗಿ ನೆರವೇರಿತು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0