ನಮ್ಮ ಧ್ವನಿಯ ಆರೈಕೆ: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ‘ವಿಶ್ವ ಧ್ವನಿ’ ದಿನಾಚರಣೆ

Apr 18, 2026 - 17:23
 0  157
ನಮ್ಮ ಧ್ವನಿಯ ಆರೈಕೆ: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ‘ವಿಶ್ವ ಧ್ವನಿ’ ದಿನಾಚರಣೆ

ಮಡಿಕೇರಿ ಏ.18:-ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಿವಿ, ಮೂಗು, ಗಂಟಲು ವಿಭಾಗದಿಂದ "ನಮ್ಮ ಧ್ವನಿಯ ಆರೈಕೆ" ಎಂಬ ವಿಷಯದಡಿ ‘ವಿಶ್ವ ಧ್ವನಿ’ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು.     

ವೃತ್ತಿಪರ ಧ್ವನಿ ಬಳಕೆದಾರರಲ್ಲಿ ಧ್ವನಿಯ ಆರೋಗ್ಯದ ಮಹತ್ವ ಮತ್ತು ಧ್ವನಿಯ ಆರೈಕೆಯ ಅಗತ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು. 

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ, ವಾಕ್ ಮತ್ತು ಭಾμÉ ತಜ್ಞರು ಡಾ.ದಿವ್ಯಾ ಸೇಠ್ ಅವರು ಧ್ವನಿಯ ಆರೈಕೆ, ಧ್ವನಿಯ ಅಸ್ವಸ್ಥತೆಗಳನ್ನು ಗುರುತಿಸುವುದು ಮತ್ತು ವಿಶೇಷವಾಗಿ ತಮ್ಮ ವೃತ್ತಿಗಳಲ್ಲಿ ಧ್ವನಿಯನ್ನು ಹೆಚ್ಚು ಅವಲಂಬಿಸಿರುವ ವ್ಯಕ್ತಿಗಳಲ್ಲಿ ಆರೋಗ್ಯಕರ ಧ್ವನಿ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. 

ಸ್ನಾತಕೋತ್ತರ ಇಎನ್ಟಿ ವಿದ್ಯಾರ್ಥಿನಿ ಡಾ.ಪೂಜಾ ಅವರು ಧ್ವನಿಯ ವಿಕಸನವನ್ನು ವಿವರಿಸಿದರು. ಇದು ಅಭಿವ್ಯಕ್ತಿಗೆ ಪ್ರಬಲ ಮಾಧ್ಯಮವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಒತ್ತಿ ಹೇಳಿದರು. 

ಧ್ವನಿ ಕೇವಲ ಒಂದು ಪ್ರಮುಖ ಅಂಗವಲ್ಲದೆ, ಮಾನವರನ್ನು ಸುತ್ತಮುತ್ತಲಿನ ಪ್ರಪಂಚದೊಂದಿಗೆ ಅರ್ಥಪೂರ್ಣವಾಗಿ ಸಂಪರ್ಕಿಸಲು ಸ್ವರ ಪೆಟ್ಟಿಗೆ ಹೇಗೆ ಶಕ್ತಗೊಳಿಸುತ್ತದೆ ಎಂಬುದರ ಕುರಿತು ವಿವರಿಸಿದರು. 

1993 ರಿಂದ ಉತ್ಸಾಹದಿಂದ ಸಂಗೀತವನ್ನು ಬೋಧಿಸುತ್ತಿರುವ ಮತ್ತು ತಮ್ಮ ಸಮರ್ಪಣೆ ಹಾಗೂ ಬದ್ಧತೆಯಿಂದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತಿರುವ ಖ್ಯಾತ ಸಂಗೀತ ಶಿಕ್ಷಕಿ ವಿದುಷಿ ಸರೋಜ ಸುಧಾಕರ್ ಅವರನ್ನು ಸನ್ಮಾನಿಸಲಾಯಿತು. 

ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ದೈನಂದಿನ ಜೀವನದಲ್ಲಿ ಧ್ವನಿ ಆರೋಗ್ಯದ ಮಹತ್ವ ಕುರಿತು ಮಾಹಿತಿ ನೀಡಿದರು. 

ಇಎನ್ಟಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಶ್ವೇತಾ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಸಂವಹನ ಮತ್ತು ಗುರುತಿನ ಆಧಾರವಾಗಿ ಧ್ವನಿಯ ಮಹತ್ವ ಬಗ್ಗೆ ಸವಿವರಾಗಿ ಮಾಹಿತಿ ನೀಡಿದರು. 

ಧ್ವನಿ ಉತ್ಪಾದನೆಯಲ್ಲಿ ಮಾತ್ರವಲ್ಲದೆ, ವಾಯು ಮಾರ್ಗವನ್ನು ರಕ್ಷಿಸುವಲ್ಲಿ ಮತ್ತು ದೈನಂದಿನ ಜೀವನದಲ್ಲಿ ಪರಿಣಾಮಕಾರಿ ಸಂವಹನ ಸಕ್ರಿಯಗೊಳಿಸುವಲ್ಲಿ ಸ್ವರಪೆಟ್ಟಿಗೆಯ ಪ್ರಮುಖ ಪಾತ್ರವನ್ನು ಅವರು ಉಲ್ಲೇಖಿಸಿದರು. 

ಉಪ-ಪ್ರಾಂಶುಪಾಲರಾದ ಡಾ.ಇಶಾ ರಾವ್, ಸಿಎಒ ರೋಹಿಣಿ ಮತ್ತು ಆರ್‍ಎಂಒ ಡಾ.ಧನಂಜಯ ಕುಮಾರ್ ಉಪಸ್ಥಿತರಿದ್ದರು.

ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ಪೂಜಾ (ಇಎನ್ಟಿ) ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಎಂಬಿಬಿಎಸ್ ವಿದ್ಯಾರ್ಥಿಗಳಾದ ಐಶ್ವರ್ಯ ಮತ್ತು ಪ್ರತೀಕ್ಷಾ ಅವರು ನಿರೂಪಿಸಿದರು. ಇಎನ್ಟಿ ಸಹಾಯಕ ಪ್ರಾಧ್ಯಾಪಕ ಡಾ. ನಳಿನಾ ಅವರು ವಂದಿಸಿದರು. 

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಂಗೀತ ವಿದ್ಯಾರ್ಥಿಗಳು, ಗಾಯಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅದನ್ನು ಅರ್ಥಪೂರ್ಣ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವು ಧ್ವನಿಯ ಆರೈಕೆಯ ಮಹತ್ವವನ್ನು ಮತ್ತೊಮ್ಮೆ ಒತ್ತಿ ಹೇಳಿತು ಮತ್ತು ಆರೋಗ್ಯಕರ ಧ್ವನಿ ಪರಿಣಾಮಕಾರಿ ಸಂವಹನಕ್ಕೆ ಅಗತ್ಯವೆಂಬ ಸಂದೇಶವನ್ನು ಸಾರಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0