ಗುಂಡಿಕೆರೆಯಲ್ಲಿ ಎಸ್.ವೈ.ಎಸ್ ಮಾದರಿ ಮದುವೆ ಅಭಿಯಾನ ಹಾಗೂ ಯೂನಿಟ್ ಕಾನ್ಫರೆನ್ಸ್ ಕಾರ್ಯಕ್ರಮ

Apr 18, 2026 - 19:17
 0  235
ಗುಂಡಿಕೆರೆಯಲ್ಲಿ ಎಸ್.ವೈ.ಎಸ್ ಮಾದರಿ ಮದುವೆ ಅಭಿಯಾನ ಹಾಗೂ ಯೂನಿಟ್ ಕಾನ್ಫರೆನ್ಸ್ ಕಾರ್ಯಕ್ರಮ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಗುಂಡಿಕೆರೆಯ ಸುನ್ನೀ ಯುವಜನ ಸಂಘ (ಎಸ್ ವೈಎಸ್) ಶಾಖೆಯ ವತಿಯಿಂದ ಮಾದರಿ ಮದುವೆ ಅಭಿಯಾನ ಹಾಗೂ ಯೂನಿಟ್ ಕಾನ್ಫರೆನ್ಸ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಗುಂಡಿಕೆರೆ ಜಮಾಅತ್ ಅಧ್ಯಕ್ಷ ಎಂ.ಎಸ್.ಉಮ್ಮರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್ ವೈ ಎಸ್ ರಾಜ್ಯ ಸಮಿತಿಯ ಸದಸ್ಯ ಅಹ್ಮದ್ ಮದನಿ ಉದ್ಘಾಟಿಸಿ ಮಾತನಾಡಿದರು.

ಜಮಾಅತ್ ಮಾಜಿ ಖತೀಬರಾದ ಅಬ್ದುಲ್ ಸಮದ್ ದಾರಿಮಿ, ಎಸ್ ವೈ ಎಸ್ ಅಧ್ಯಕ್ಷ ಬದುರುದ್ದೀನ್,ಅಬ್ದುಲ್ಲಾ ಖಾಸಿಮಿ ಶುಭ ಹಾರೈಸಿ ಮಾತನಾಡಿದರು. ಮುಖ್ಯ ಭಾಷಣಗಾರರಾಗಿ ಮೊಹಮ್ಮದ್ ರಾಫಿ ಹಿಮಮಿ ಅಯ್ಯಂಗೇರಿ ಪಾಲ್ಗೊಂಡು ಮಾತನಾಡಿದರು.

 ವೇದಿಕೆಯಲ್ಲಿ ಗುಂಡಿಕೆರೆ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಲೀಂ, ಕರ್ನಾಟಕ ಮುಸ್ಲಿಂ ಜಮಾಅತ್ ಗುಂಡಿಕೆರೆ ಅಧ್ಯಕ್ಷ ಉಸ್ಮಾನ್ ಬಾಖವಿ,ಕೊಡಗು ಸುನ್ನಿ ಮುಸ್ಲಿಂ ವೆಲ್ಫೇರ್ ಯುಎಇ ಸಮಿತಿಯ ನಿಸಾರ್,ಎಸ್ ವೈಎಸ್ ಕೋಶಾಧಿಕಾರಿ ಮುಜೀಬ್, ಎಸ್ಎಸ್ಎಫ್ ಅಧ್ಯಕ್ಷ ಅಲಿ ಉಸೈದ್ ಲತೀಫಿ,ಎಸ್ ವೈ ಎಸ್ ಸರ್ಕಲ್ ನಾಯಕರಾದ ನಸೀರ್ ಉಬೈದ್,ಮತ್ತಿತರರು ಉಪಸ್ಥಿತರಿದ್ದರು. ಶಫೀಕ್ ಹಿಮಮಿ ಪ್ರಾರ್ಥಿಸಿ, ಕಾರ್ಯದರ್ಶಿ ಆಬಿದ್ ಸ್ವಾಗತಿಸಿ, ಶಫೀಕ್ ಸರ್ವರನ್ನು ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1