ಜಾತಿ ಗಣತಿ ಸಮೀಕ್ಷೆ : ಎಲ್ಲೂ ನೆಟ್ವರ್ಕ್ ಇಲ್ಲ, ಆ್ಯಪ್ ವರ್ಕ್ ಆಗ್ತಿಲ್ಲ | ತಾಂತ್ರಿಕ ಸಮಸ್ಯೆ ಪರಿಹರಿಸಲು ಗಣತಿದಾರರ ಮನವಿ

ಜಾತಿ ಗಣತಿ ಸಮೀಕ್ಷೆ : ಎಲ್ಲೂ ನೆಟ್ವರ್ಕ್ ಇಲ್ಲ, ಆ್ಯಪ್ ವರ್ಕ್ ಆಗ್ತಿಲ್ಲ | ತಾಂತ್ರಿಕ ಸಮಸ್ಯೆ ಪರಿಹರಿಸಲು ಗಣತಿದಾರರ ಮನವಿ

ಮಡಿಕೇರಿ:ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಗಣತಿ ಕಾರ್ಯದ ಕುರಿತು (ಸೆಪ್ಟೆಂಬರ್ 26 ರಂದು ) ನಡೆಸಿದ ಸಭೆಯಲ್ಲಿ ನೋಡಲ್ ಅಧಿಕಾರಿಗಳು ಮತ್ತು ಮೇಲ್ವಿಚಾರಕರು ತಮ್ಮ ಅಭಿಪ್ರಾಯವನ್ನು ಎಲ್ಲೂ ನೆಟ್ವರ್ಕ್ ಇಲ್ಲ, ಆ್ಯಪ್ ವರ್ಕ್ ಆಗ್ತಿಲ್ಲ : ಸರ್ವರ್ ಸಮಸ್ಯೆಯಿಂದ ಕೆಲವು ಗಣತಿದಾರರಿಗೆ ಒಂದೂ ಮನೆಯ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಿ App ಲೋಡ್ ಮಾಡಿ ಸಬ್ ಮಿಟ್ ( Up load & Submit ) ಎಂದು ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯಲಾಯಿತು.

 ಈ ದಿನ ಬೆಳಿಗ್ಗೆ 11.00 ರ ನಂತರ ಈ ಕಾರ್ಯವು ಎಲ್ಲಿಡೆ ಸ್ಥಗಿತಗೊಂಡಿತು. ಈ ದಿನ ಮಧ್ಯಾಹ್ನದ ನಂತರ ಇದು ಸರಿಯಾಗುತ್ತದೆ ಎಂದು ಪ್ರತಿಕ್ರಿಯಿಸಿದರು. ಆದರೆ, ಇದು ಈಗ ಆಗುತ್ತಿಲ್ಲ. ಈ ಮಧ್ಯೆ ಈ ದಿನ ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ ಸಿಎಂ, ಡಿಸಿ ಮತ್ತು ಸಿಇಓ ಗಳ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಇದನ್ನು ಕಡ್ಡಾಯವಾಗಿ ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದ್ದು, ಡಿಸಿ ಮತ್ತು ಸಿಇಓ ಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಯಾವುದೇ ನೆಪ ಹೇಳದೇ ಪೂರ್ಣಗೊಳಿಸಬೇಕು. ಈಗ ಶೇಕಡಾ 4 ರಷ್ಟು ಮಾತ್ರ ಗಣತಿ ಆಗಿದೆ. ಶಿಕ್ಷಕರು ಗಣತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದಿದ್ದಾರೆ.

ಆದರೆ, ಈ ದಿನ ಮಧ್ಯಾಹ್ನದ ನಂತರ ರಾಜ್ಯದ ಎಲ್ಲೆಡೆ ಕೂಡ ಗಣತಿ ಕಾರಗಯದ ತಾಂತ್ರಿಕ ಸಮಸ್ಯೆಯ ಬಗ್ಗೆ ಟಿ.ವಿ.ಗಳಲ್ಲಿ ವಿಸ್ತ್ರತ ವರದಿ ಪ್ರಕಟಗೊಳ್ಳುತ್ತಿದೆ. ಬೇರೆ ಜಿಲ್ಲೆಗಳಲ್ಲಿ ಶಿಕ್ಷಕರು ಅಧಿಕಾರಿಗಳ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪ್ರತಿಭಟಿಸಿದ ವರದಿಗಳು ಬಂದಿವೆ. ಇದು ಇನ್ನುಮುಂದೆ ಏನಾಗುತ್ತದೆಯೋ/ಹೇಗಾಗುತ್ತದೆಯೇ ತಿಳಿದಿಲ್ಲ. ಆ್ಯಪ್ ಮತ್ತು ನೆಟ್ವರ್ಕ್ ಸರಿಯಾಗದಿದ್ದಲ್ಲಿ ಗಣತಿ ಸಮೀಕ್ಷೆಯನ್ನು off line ಮೂಲಕ ಮಾಡಿದರೆ ಮಾತ್ರ ಸರಿಯಾಗಬಹುದು. ಕರ್ನಾಟಕವು ಟೆಕ್ನಾಲಜಿಯಲ್ಲಿ ಮುಂದಿದ್ದರೂ ಈ ಗಣತಿ ಕಾರ್ಯದ ಆ್ಯಪ್ ಮ್ಯಾಡ್ಯೂಲೋ ವನ್ನು ಸರಿಯಾಗಿ ಅಭಿವೃದ್ಧಿ ಮಾಡದಿರುವುದೇ ಇಷ್ಟೆಲ್ಲಾ ಆವಾಂತರಕ್ಕೆ ಕಾರಣವಾಗಿದೆ. ಗಣತಿ ಕಾರ್ಯವನ್ನು ಪೂರ್ಣಗೊಳಿಸಲು ಶಿಕ್ಷಕರು ತಯಾರಿದ್ದರೂ, ಈ ಕಾರ್ಯಕ್ಕೆ ಶಿಕ್ಷಕರು ದಿನವಿಡೀ ಪರಿತಪಿಸುತ್ತಿದ್ದರೂ ನೆಟ್ವರ್ಕ್ , ಆ್ಯಪ್ ಮತ್ತು ಸರ್ವರ್ ಸಮಸ್ಯೆಯಿಂದ ಗಣತಿ ಸಮೀಕ್ಷೆ ಕುಂಠಿತವಾಗುತ್ತಿದೆ. ಈ ತಾಂತ್ರಿಕ ಸಮಸ್ಯೆಯ ಬಗ್ಗೆ ಸರ್ಕಾರದ ವತಿಯಿಂದ ಸರಿಯಾದ ಕ್ರಮ ಕೈಗೊಂಡರೆ ಇದು ಸಫಲವಾಗುತ್ತದೆ ಎಂಬುದು ಗಣತಿದಾರರ ಬೇಡಿಕೆಯಾಗಿದೆ.