ಚಾಮಿಯಾಲ ಅಂಗನವಾಡಿ ಹಾಗೂ ಮಸೀದಿ ಜಾಗದ ವಿಷಯದಲ್ಲಿ ಜಗಳ: ಮಹಿಳೆಯ ಮೇಲೆ ಹಲ್ಲೆ ಆರೋಪ ಜೆಡಿಎಸ್ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಸೇರಿ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲು
ಮಡಿಕೇರಿ: ಚಾಮಿಯಾಲ ಮಸೀದಿ ಹಾಗೂ ಅಂಗನವಾಡಿ ಜಾಗಕ್ಕೆ ಸಂಬಂಧಿಸಿದಂತೆ ನಡೆದ ಹಲ್ಲೆ ವಿಷಯದಲ್ಲಿ ಚಾಮಿಯಾಲ ಗ್ರಾಮದ ಎಂಟು ಮಂದಿಯ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮಿಯಾಲ ಗ್ರಾಮಾದ ಸೈಫುದ್ದೀನ್ ಕೆ.ಹೆಚ್, ಅಜ್ಮುದ್ದೀನ್ ಕೆ.ಹೆಚ್,ಅನೀಫ ಕೆ.ಹೆಚ್,ಅಶ್ಫಾಕ್ ಕೆ.ಎ,ರಶೀದ್ ಕೆ.ಯು,ಸಾದುಲಿ,ಆಲಿ ಕೆ.ಎ,ಶಂಸುದ್ದೀನ್ ಕೆ.ಯು,ಅವರ ಮೇಲೆ ತನ್ಸೀಯಾ ಕೆ.ಇ ಅವರ ನೀಡಿರುವ ದೂರಿನ್ವಯ (BNS) 2023(U\s-329(3),118(1,)74, 352,351(2)r\w3(5) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಪಿರ್ಯಾದಿಯವರು ದಿನಾಂಕ 01-10-2025 ರಂದು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ವಾಖಲಾಗಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ನನ್ನ ತವರು ಮನೆ ಚಾಮಿಯಾಲದಲ್ಲಿರುತ್ತದೆ.ನಾನು ದಿನಾಂಕ:30-09-2025 ರಂದು ನನ್ನ ತವರು ಮನೆಗೆ ಬಂದಿದ್ದನು ಈ ದಿನ : 01-10-2025 ರಂದು ನಾವೆಲ್ಲರೂ ಮನೆಯಲ್ಲಿರುವಾಗ ಬೆಳ್ಳಗೆ, 10-30 ಗಂಟೆಗೆ ನಮ್ಮ ಗ್ರಾಮಸ್ಥರು ಮನೆಯ ಮುಂಭಾಗದಲ್ಲಿರುವ ನಮ್ಮ ತಂದೆಯವರಿಗೆ ಸೇರಿದ ಮೈತಾಡಿ ಗ್ರಾಮದ ಸರ್ವೆ ನಂಬರ್ 248/4 ರ ಜಾಗಕ್ಕೆ ಆಕ್ರಮ ಪ್ರವೇಶ ಮಾಡಿ ಜೆ.ಸಿ. ಬಿಯ ಮೂಲಕ ಬಾಳೆತೋಟವನ್ನು ನೆಲಸಮ ಮಾಡುತ್ತಿದ್ದು, ಆಲ್ಲದೇ ಜಾಗದ ಸುತ್ತ ಹೊಸ ತಂತಿಬೇಲಿಯನ್ನು ಹಾಕುತ್ತಿದ್ದರು.
ಇದನ್ನು ನೋಡಿದ ನನ್ನ ತಂದೆ ಇಸ್ಮಾಯಿಲ್ ರವರು ಮೇಲ್ಕಂಡ ಗ್ರಾಮಸ್ಥರ ಪೈಕಿ ಸೈಫುದ್ದೀನ್, ಕೆ.ಹೆಚ್, ಅಜ್ಮುದ್ದೀನ್ ಕೆ ಹೆಚ್, ಅನೀಫ್ ಕೆ.ಹೆಚ್, ಅಶ್ಫಾಕ್ ಕೆ.ವ ರಶೀದ್ ಕೆ.ಯು ಸಾದುಲಿ ಕೆ.ಎ, ಅಲಿ ಕೆ.ಎ, ಸಂಶುದ್ದೀನ್ ಕೆ ಯು ಹಾಗೂ ಇತರರೊಂದಿಗೆ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ಬಗ್ಗೆ ಕೇಳಲು ಹೋದಾಗ ಅವರೆಲ್ಲರೂ ಸೇರಿ ತಂದೆಯವರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ತಂದೆಯನ್ನು ಹೊಡೆಯಲು ಮುಂದಾದಾಗ, ಮನೆಯಲಿದ್ದ ನಾನು ನನ್ನ ತಂಗಿಯಂದಿರಾದ ಸಫರಿಯಾ, ಸಮರಿಯಾ ರವರು ಸೇರಿ ತಡೆಯಲು ಹೋದಾಗ ಅವರ ಪೈಕಿ ಸೈಫುದ್ದೀನ್, ಅಜ್ಮುದ್ದೀನ್, ಅನೀಫರವರುಗಳು ಅವರ ಕೈಗಳಲಿ ಹಿಡಿದಿದ ದೊಡ್ಡ ಯಿಂದ ನನ್ನ ಕೈಕಾಲಿಗೆ, ಮಂಡಿಗೆ ಮತ್ತು ಬೆನ್ನಿಗೆ ಹೊಡೆದು ನೋವು ಪಡಿಸಿದರು.
ಅಷ್ಟರಲ್ಲಿ ರಶೀದ್ ರವರು ನನ್ನ ನೈಟಿ ಬಟ್ಟೆಯನ್ನು ಹರಿದು ಹಾಕಿದ್ದಲ್ಲದೇ, ನನ್ನ ತಲೆಕೂದಲನ್ನು ಹಿಡಿದು ಎಳೆದು ನೋವು ಪಡಿಸಿದನು. ಆಗ ನಾನು ನೋವು ತಾಳಲಾರದೇ ಸುಸ್ತಾಗಿ ಬಿದ್ದು ಹೋದೆನು. ನನ್ನನ್ನು ನನ್ನ ತಂದೆ ಮತ್ತು ತಂಗಿಯಂದಿರು ಮನೆಗೆ ಮನೆಗೆ ಕರೆದುಕೊಂಡು ಹೋಗಿ ನಂತರ ಚಿಕಿತ್ಸೆಗೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ.
ಆದ್ದರಿಂದ ನಮ್ಮ ತಂದೆಯವರಿಗೆ ಸೇರಿದ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ತಂದೆಗೆ ಮತ್ತು ನನಗೆ ಆವ್ಯಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ನನಗೆ ದೊಣ್ಣೆಯಿಂದ ಶರೀರದ ಭಾಗಕ್ಕೆ ಹೊಡೆದು ನೋವು ಪಡಿಸಿದ ಮತ್ತು ನನ್ನ ಬಟ್ಟೆಗಳನ್ನು ಹರಿದುಹಾಕಿ, ಕೂದಲನ್ನು ಹಿಡಿದು ಎಳೆದಾಡಿದ ಈ ಮೇಲ್ಕಂಡ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ತನ್ಸೀಯಾ ಕೆ.ಇ ದೂರಿನಲ್ಲಿ ಉಲ್ಲೇಖಿಸಿದ್ದಾರೆ.