ಮೇ 05 ರಂದು ಕರ್ಣಂಗೇರಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ರಥೋತ್ಸವ
admincoorgdaily

ಮಡಿಕೇರಿ: ೮೦ ವರ್ಷಗಳ ಇತಿಹಾಸವಿರುವ ಕರ್ಣಂಗೇರಿ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ಮೇ ೫ರಂದು ನಡೆಯುವ ರಥೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಭಕ್ತರ ಸಹಕಾರ ಕೋರಿ ದೇವಾಲಯ ಸಮಿತಿ ಮನವಿ ಮಾಡಿದೆ. ಬೆಳಿಗ್ಗೆ ೬ಕ್ಕೆ ಧ್ವಜಾರೋಹಣ, ೧೧.೪೫ಕ್ಕೆ ರಥೋತ್ಸವ, ಮಧ್ಯಾಹ್ನ ೧೨ಕ್ಕೆ ಅನ್ನಸಂತರ್ಪಣೆ ಇರಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ವಿತರಣೆ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಗೋವಿಂದ ಸ್ವಾಮಿ ತಿಳಿಸಿದರು.
ದೇವಾಲಯದ ವಾರ್ಷಿಕೋತ್ಸವಕ್ಕೆ ರಾಜ್ಯ, ಹೊರರಾಜ್ಯದಿಂದ ಸಾವಿರಾರು ಭಕ್ತರು ಬರುತ್ತಾರೆ. ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಅವಕಾಶವಿದೆ ಎಂದು ಧರ್ಮದರ್ಶಿ ಗೋವಿಂದ ಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದೇವಾಲಯ ಸಮಿತಿಯ ಸದಸ್ಯ ಕಿರಣ್ ಕುಮಾರ್, ಭಕ್ತರಾದ ಚುಮ್ಮಿ ದೇವಯ್ಯ, ಹರೀಶ್ ಉಪಸ್ಥಿತರಿದ್ದರು.