ಚೀಯಕ್ ಪೂವಂಡ ಒಕ್ಕ ಕೊಡವ ಒಕ್ಕಡ ಕೇರ್ ಬಲಿ ನಮ್ಮೆಗೆ ಶಾಸಕ‌ ಎಎಸ್ ಪೊನ್ನಣ್ಣ ಚಾಲನೆ

Apr 23, 2026 - 14:24
 0  295
ಚೀಯಕ್ ಪೂವಂಡ ಒಕ್ಕ  ಕೊಡವ ಒಕ್ಕಡ ಕೇರ್ ಬಲಿ ನಮ್ಮೆಗೆ ಶಾಸಕ‌ ಎಎಸ್ ಪೊನ್ನಣ್ಣ ಚಾಲನೆ

ನಾಪೋಕ್ಲು;ಚೀಯಕ್ ಪೂವಂಡ ಹಗ್ಗ ಜಗ್ಗಾಟ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ, ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಚೀಯಕ್ ಪೂವಂಡ ಒಕ್ಕ ಕೊಡವ ಒಕ್ಕಡ ಕೇರ್ ಬಲಿ ನಮ್ಮೆ ಉತ್ಸವ ಇದಾಗಿದ್ದು, ಕೊಡವ ಕುಟುಂಬಗಳ ನಡುವೆ ನಡೆಯುವ ಈ ಹಗ್ಗ ಜಗ್ಗಟ್ಟ ಕಾರ್ಯಕ್ರಮಕ್ಕೆ ಶುಭ ಕೋರಿ ಮಾತನಾಡಿದ ಶಾಸಕರು, ಇದು ಕೊಡಗಿನಾದ್ಯಂತ ಕ್ರೀಡೋತ್ಸವದ ಕಾಲ.

ಶೌರ್ಯಕ್ಕೆ ಮತ್ತೆ ಕ್ರೀಡೆಗೆ ಹೆಸರುವಾಸಿಯಾದ ಕೊಡಗು ಜಿಲ್ಲೆಗೆ ಇಂತಹ ಕ್ರೀಡಾಕೂಟಗಳು ಮೆರುಗನ್ನು ತಂದಿವೆ. ವಿಶೇಷವಾಗಿ ಕೊಡವ ಕುಟುಂಬಗಳ ನಡುವೆ ನಡೆಯುವ ಈ ಪಂದ್ಯಾಟ, ಸಮಾಜ ಬಾಂಧವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಉತ್ತಮ ಸಮಾಜ ನಿರ್ಮಿಸುವತ್ತ ಚಿಂತಿಸಲು ಒಂದು ವೇದಿಕೆಯಂತಿದೆ. ಇಲ್ಲಿಂದ ಕಲಿಯುವ ಪ್ರತಿಯೊಂದು ಉತ್ತಮ ನಿದರ್ಶನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಭ್ಯ ಸುಭದ್ರ ಹಾಗೂ ನಾಗರೀಕ ಸಮಾಜ ನಿರ್ಮಿಸುವತ್ತ ನಾವೆಲ್ಲರೂ ಗಮನಹರಿಸಬೇಕೆಂದು ಹೇಳುತ್ತಾ, ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಅರುಣ್ ಮಾಚಯ್ಯ, ಚೀಯಕ್ ಪೂವಂಡ ಕೇರ್ ಬಲಿ ನಮ್ಮೆರ ಅಧ್ಯಕ್ಷರು ಸಿ ಕೆ ಬೋಪಣ್ಣ, ಕುಟುಂಬಸ್ಥರ ಅಧ್ಯಕ್ಷರು ಅಪ್ಪಚ್ಚು, ಪಟ್ಟೆದಾರ್ ಚಿಟ್ಟಿಯಪ್ಪ, ಕೊಡವ ಕೇರ್ ಬಲಿ ಅಕಾಡೆಮಿ ಅಧ್ಯಕ್ಷರು ಕಿರಣ್ ಪೊನ್ನಪ್ಪ, ಕೊಡವ ಸಮಾಜ ಅಧ್ಯಕ್ಷರು ಮುಂಡಾಂಡ ಸಿ ನಾಣಯ್ಯ, ಹಿರಿಯರು ಬೊಳ್ಳಚೇಟ್ಟಿರ ಸುರೇಶ್, ಚೀಯಕ್ ಪೂವಂಡ ಕೇರ್ ಬಲಿ ನಮ್ಮೆರ ಸದಸ್ಯರು ಮಂಜುನಾಥ್ ಕಟ್ಟಿ, ನವೀನ್, ನಾಚಪ್ಪ, ಸತೀಶ್ ದೇವಯ್ಯ, ಸುನಿಲ್ ಮಾಚಯ್ಯ, ಸಚಿನ್ ಮುತ್ತಪ್ಪ, ಪ್ರಕಾಶ್ ಮಂದಣ್ಣ, ಸಚಿನ್ ಪೂವಯ್ಯ, ಕೆಡಿಪಿ ಸದಸ್ಯರು ಬಾಚಮಾಂಡ ಲವ ಚಿಣ್ಣಪ್ಪ, ಗ್ಯಾರಂಟಿ ಅನುಷ್ಠಾನ ಉಪಾಧ್ಯಕ್ಷರು ಶೇರಿ, ವಲಯ ಅಧ್ಯಕ್ಷರು ಕುಶಾಲಪ್ಪ, ಮಿಥುನ್ ಮಾಚಯ್ಯ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0