ಚೆಂಬು:ಎ.ಎಸ್ ಪೊನ್ನಣ್ಣ ಅಧ್ಯಕ್ಷತೆಯಲ್ಲಿ ವನ್ಯಪ್ರಾಣಿಗಳ ಹಾವಳಿ ಕುರಿತು ಸಭೆ
ಚೆಂಬು:ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಅಧ್ಯಕ್ಷತೆಯಲ್ಲಿ ಮಾನವ-ಪ್ರಾಣಿ ಸಂಘರ್ಷ, ವನ್ಯಪ್ರಾಣಿಗಳಿಂದ ಆಸ್ತಿ ಹಾಗೂ ಕೃಷಿ ಹಾನಿ ಸಮಸ್ಯೆಗಳ ಕುರಿತು ಹಾಗೂ ಅರಣ್ಯ ಅಂಚಿನ ನಿವಾಸಿಗಳ ಸಮಸ್ಯೆಗಳ ಕುರಿತು ಸಭೆ ನಡೆಯಿತು.
ಈ ಸಭೆಯಲ್ಲಿ ಚೆಂಬು, ಸಂಪಾಜೆ ಹಾಗೂ ಪೆರಾಜೆ ವ್ಯಾಪ್ತಿಯ ಸಾರ್ವಜನಿಕರು ಭಾಗವಹಿಸಿ, ಶಾಸಕರಲ್ಲಿ ತಮ್ಮ ಅಹವಾಲುಗಳನ್ನು ಹೇಳಿಕೊಂಡು, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಲಹೆ-ಸೂಚನೆಗಳನ್ನು ನೀಡಿದರು. ಪ್ರಮುಖವಾಗಿ ಆನೆಗಳಿಂದಾಗುತ್ತಿರುವ ಕೃಷಿಹಾನಿ, ಅರಣ್ಯ ಇಲಾಖೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಆಗುತ್ತಿರುವ ತೊಡಕುಗಳು, ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಗ್ರಾಮಸ್ಥರ ಸಮಸ್ಯೆಗಳನ್ನು ಶಾಸಕರಿಗೆ ಮನದಟ್ಟು ಮಾಡಿಕೊಂಡಾಗ ಶಾಸಕರು, ಮೇಲಿನ ಹಂತದಲ್ಲಿ ಚರ್ಚಿಸಿ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯರಾದ ಸಂಕೇತ್ ಪೂವಯ್ಯ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ವಲಯ ಅಧ್ಯಕ್ಷರಾದ ರವಿರಾಜ್ ಹೊಸೂರು, ಸೂರಜ್ ಹೊಸೂರು, ಸರಕಾರಿ ನಾಮ ನಿರ್ದೇಶಕ ಅಧ್ಯಕ್ಷರುಗಳು/ಸದಸ್ಯರುಗಳು, ಡಿಸಿಸಿ ಪ್ರಮುಖರು, ಬ್ಲಾಕ್ ಕಾಂಗ್ರೆಸ್ ಪ್ರಮುಖರು, ಸ್ಥಳೀಯ ಮುಖಂಡರುಗಳು ಚೆ0ಬು, ಸಂಪಾಜೆ, ಪೆರಾಜೆಯ ಪಕ್ಷದ ಕಾರ್ಯಕರ್ತರು, ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಲಾಯಿತು.