ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 54.90 ಲಕ್ಷ ನಿವ್ವಳ ಲಾಭ:ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮಾಹಿತಿ
ಮಡಿಕೇರಿ: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಟ್ಟು ರೂ.155.77 ಕೋಟಿ ವಹಿವಾಟು ನಡೆಸಿ ರೂ 54.90 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ 1195 ಸದಸ್ಯರಿದ್ದು, ಸದಸ್ಯರಿಂದ ಒಟ್ಟು ರೂ.1.25 ಕೋಟಿ ಪಾಲು ಬಂಡವಾಳವಿದೆ. ಕ್ಷೇಮನಿಧಿ ಸೇರಿ ಇತರೆ ನಿಧಿಗಳು ರೂ.3.55 ಕೋಟಿ ಹಾಗೂ ನಿರುಖು ಠೇವಣಿ ಸಂಚಯ ಠೇವಣಿ ಹಾಗೂ ಇತರೆ ಠೇವಣಿ ಸೇರಿ ಒಟ್ಟು ರೂ. 19.75 ಕೋಟಿ ಇರುತ್ತದೆ. ಸದಸ್ಯರ ಅವಶ್ಯಕತೆಗನುಗುಣವಾಗಿ ಕೆ.ಸಿ.ಸಿ ಫಸಲು ಸಾಲ ಸೇರಿ 2024-25ನೇ ಸಾಲಿನಲ್ಲಿ ರೂ.23.44 ಕೋಟಿ ಲಕ್ಷಗಳ ಸಾಲವನ್ನು ಸದಸ್ಯರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು
ಆ.24ರಂದು ಮಹಾಸಭೆ:
ವಾರ್ಷಿಕ ಮಹಾಸಭೆ ಆ.24ರಂದು ಸಂಘದ ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಲಾಭಾಂಶದಲ್ಲಿ ಸದಸ್ಯರಿಗೆ ಶೆ.15 ರಂತೆ ಡಿವಿಡೆಂಟ್ ನೀಡಲು ತೀರ್ಮಾನಿಸಿದೆ. ಸಂಘದ ಸದಸ್ಯ ಸೂದನ ಗಣೇಶ್ ಅವರ ಪುತ್ರಿ ಧನ್ಯ ಪಿಎಚ್‌ಡಿಯಲ್ಲಿ 5 ಚಿನ್ನದ ಪದಕ ಪಡೆದಿದ್ದು, ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕಣಜಾಲು ಕೆ.ಪೂವಯ್ಯ, ನಿರ್ದೇಶಕರಾದ ಬಿ.ಎಂ.ಕಾಶಿ, ಬಟ್ಟೀರ.ಸಿ.ವೇಣುಗೋಪಾಲ್, ಮರದಾಳು ಚೇತನ್, ಚೋಳಪಂಡ ವಿಜಯ್ ಉಪಸ್ಥಿತರಿದ್ದರು.