ಸ್ವಚ್ಚ ಕೊಡಗು, ಸುಂದರ ಕೊಡಗು: ಸರ್ವರೂ ಕೈ ಜೋಡಿಸುವಂತೆ ಶಾಸಕ ಡಾ. ಮಂತರ್ ಗೌಡ ಕರೆ
admincoorgdaily
ಮಡಿಕೇರಿ:ಕೊಡಗು ಎನ್ನುವುದು ಭೂಲೋಕದ ಸ್ವರ್ಗ. ದೇಶ ವಿದೇಶಗಳ ಪ್ರಜೆಗಳ ಮನಸೂರೆಗೊಂಡ ಇಲ್ಲಿಯ ಅತ್ಯುತ್ತಮ ಪರಿಸರ. ದೇಶದ ನಾನಾ ಭಾಗಗಳಿಂದ ತಮ್ಮ ನಿವೃತ್ತ ಜೀವನ ನಡೆಸಲು ಕೊಡಗು ಜಿಲ್ಲೆಗೆ ಬರುವವರ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಅಷ್ಟು ಸುಂದರ, ಪ್ರಾಕೃತಿಕ ಸೌಂದರ್ಯ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಲುಷಿತವಾಗುತ್ತಿದೆ ಎನ್ನುವ ದುಃಖಕರ ಸನ್ನಿವೇಶ ಹೆಚ್ಚಾಗುತ್ತಿದೆ.
ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ನಾಳೆ ಬೆಳಿಗ್ಗೆ 8 ಗಂಟೆಯಿಂದ ನಾನಾ ಸಂಘಟನೆಗಳ ಜೊತೆಗೆ ಜಿಲ್ಲಾಡಾಳಿತ ಸ್ವಚ್ಛ ಕೊಡಗು, ಸುಂದರ ಕೊಡಗು ಎನ್ನುವ ಅಭಿಯಾನವನ್ನು ನಡೆಸುತ್ತಿದೆ. ಪುರಸಭೆ, ಎಲ್ಲ ಗ್ರಾಮ ಪಂಚಾಯಿತಿ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಕೂಡ ಸಕ್ರಿಯವಾಗಿ ಪಾಲ್ಗೊಳ್ಳಲಿದೆ.ನಮ್ಮ ಸುಂದರ ಪರಿಸರ ಸಂರಕ್ಷಣೆಗೆ ಕೈಜೋಡಿಸೋಣ ಎಂದು ಶಾಸಕ ಡಾ.ಮಂತರ್ ಗೌಡ ಸರ್ವರಲ್ಲಿ ಕೋರಿದ್ದಾರೆ.