ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಅಪ್ಪಯ್ಯಗೌಡರ ಪುಣ್ಯಸ್ಮರಣೆ

ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಅಪ್ಪಯ್ಯಗೌಡರ ಪುಣ್ಯಸ್ಮರಣೆ

ಮಡಿಕೇರಿ:ಭಾರತದ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಅಪ್ಪಯ್ಯಗೌಡರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.    

ಮಡಿಕೇರಿಯಲ್ಲಿ ಆಯೋಜನಗೊಂಡ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕರು, ಮೊದಲಿಗೆ ಸುಬೇದಾರ್ ಅಪ್ಪಯ್ಯ ಗೌಡ ರವರ ಪುತ್ತಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಬಳಿಕ ಹಳೆಕೋಟೆ ಆವರಣದಲ್ಲಿರುವ ಅಪ್ಪಯ್ಯ ಗೌಡ ರವರ ಸ್ಮಾರಕ ಬಳಿಗೆ ಕಾಲ್ನಡಿಗೆ ಮೂಲಕ ಇತರ ಗಣ್ಯರೊಂದಿಗೆ ತೆರಳಿದ ಶಾಸಕರು ಅಲ್ಲಿ ಸಹ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. 

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು, ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದವರಲ್ಲಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರವರ ಹೆಸರು ಮುಂಚೂಣಿಯಲ್ಲಿ ಇದೆ. 

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕೆಚ್ಚೆದೆಯ ಕೊಡುಗೆಯನ್ನು ನೀಡಿ ಅಮರರಾದ ಗುಡ್ಡೆಮನೆ ಅಪ್ಪಯ್ಯ ಗೌಡರು ಸದಾ ನಾಡಿನ ಜನರ ಮನದಲ್ಲಿ ಇದ್ದಾರೆ. ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ನಡೆ ನುಡಿಗಳಿಂದ ನಾವುಗಳು ಇಂದು ಕಲಿಯಬೇಕಾಗಿರುವ ಹಲವಾರು ಅಂಶಗಳು ಇವೆ. ಸ್ವಾತಂತ್ರ್ಯ ಸೇನಾ ನಿಗೆ ಗೌರಾರ್ಪಣೆ ಮಾಡಿರುವುದು ತನಗೆ ಸಂತೋಷ ನೀಡಿದೆ ಎಂದು ಮಾನ್ಯ ಶಾಸಕರು ಬಣ್ಣಿಸಿದರು.

ಈ ಸಂದರ್ಭದಲ್ಲಿ ಮಡಿಕೇರಿ ಶಾಸಕರಾದ ಮಂಥರ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಅರೆಭಾಷೆ ಅಕಾಡೆಮಿ ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಶಾಸಕರಾದ ಕೆ.ಜಿ ಬೋಪಯ್ಯ, ಜಿಲ್ಲಾ ಆಡಳಿತ ಹಾಗೂ ಸಮುದಾಯ ಬಾಂಧವರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.