ಬೇಟೋಳಿ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ

Dec 19, 2025 - 13:55
 0  443
ಬೇಟೋಳಿ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ

ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಬೇಟೋಳಿ ವಲಯ ಹೆಗ್ಗಳ ಬೂಧಿಮಾಳ ಬೇಟೋಳಿ ರಾಮನಗರ ನೀಮಲಗಿರಿ ಭಾಗದಲ್ಲಿ 2024/25 ನೆ ಸಾಲಿನ ಮಳೆ ಹಾನಿ ಪರಿಹಾರ ನಿಧಿ ಕಾಮಗಾರಿ ಸುಮಾರು 24 ಶಾಸಕರ ಅನುದಾದರಲ್ಲಿ ಲಕ್ಷ ರೂ ವೆಚ್ಚದಲ್ಲಿ 8 ಕಡೆ ರಸ್ತೆ ಡಾಂಬರೀಕರಣ ಹಾಗೂ ಕಾಂಕ್ರೀಟ್ ಕಾಮಗಾರಿ ಚಾಲನೆ ದೊರಕಿದೆ.ರಾಮನಗರ ಕೊಡುಂಗಲ್ಲೂರು ದೇವಸ್ಥಾನಕ್ಕೆ ಹೋಗುವ ರಸ್ತೆ ಕಾಮಗಾರಿ ನಡೆಯುತ್ತಿದೆ ಕಾಮಗಾರಿಯ ಗುಣಮಟ್ಟ ಪರಿಶೀಲನೆಯನ್ನು ವಲಯ ಕಾಂಗ್ರೆಸ್ ಅಧ್ಯಕ್ಷರಾದ ವರ್ಗೀಸ್ ಲೆನಿನ್ ಹಾಗೂ ರಾಮನಗರ ಭಾಗದ ಕಾರ್ಯಕರ್ತರಾದ ತೀರೇಶ್, ರಾಜೇಶ್, ಸುಮಂತ್, ಕಿಶೋರ್, ರವರು ಸೇರಿ ಇತರ ಕಾರ್ಯಕರ್ತರೊಂದಿಗೆ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಣೆ ಮಾಡಲಾಯಿತು. 

ಈ ಕಾಮಗಾರಿಗೆ ಅನುದಾನ ಒದಗಿಸಿ ಕೊಟ್ಟಿರುವ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರಿಗೆ ಹಾಗೂ ಸಹಕರಿಸಿದ ಜಿಲ್ಲಾಧ್ಯಕ್ಷರಾದ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ ರವರಿಗೆ ಹೆಗ್ಗಳ ಭೂಧಿಮಾಳ ಹಾಗೂ ಬೇಟೋಳಿ ರಾಮನಗರ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0