ಆಲೂರು ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ

ಆಲೂರು ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ

ಶನಿವಾರಸಂತೆ : ಸಮೀಪದ ಆಲೂರು ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣಿವೆ ಬಸವನಹಳ್ಳಿ ರಸ್ತೆ ಕೆಲಸ ಬರದಿಂದ ಸಾಗಿದೆ. ಗ್ರಾಮೀಣಾಭಿರುದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಯಡಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರ ಮುತುವರ್ಜಿಯಿಂದ ಅನೇಕ ವರ್ಷಗಳಿಂದ ನೀನೇಗುದಿಗೆ ಬಿದ್ದಿದ್ದ ರಸ್ತೆ ಕೆಲಸ ಬಿರುಸಿನಿಂದ ಸಾಗಿದೆ.

ಈ ರಸ್ತೆ ಅವ್ಯವಸ್ಥೆಯಿಂದ ಪ್ರತಿ ನಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ವೃದ್ಧರು ಕೃಷಿಕರು ತೊಂದರೆ ಅನುಭವಿಸುತಿದ್ದರು ಇದನ್ನು ಕಣ್ಣಾರೆ ಕಂಡ ಶಾಸಕರಾದ ಮಂತರ್ ಗೌಡ ರವರು ತಾವೇ ಮುತುವರ್ಜಿ ವಹಿಸಿ ಈ ರಸ್ತೆ ಅಭಿವೃದ್ಧಿ ಮಾಡಲೇ ಬೇಕು ಎಂದು ರಸ್ತೆ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿದ್ದರು ಇದೀಗ ರಸ್ತೆ ಕೆಲಸ ಪ್ರಾರಂಭ ಆಗಿದ್ದು ಸದ್ಯದಲ್ಲೇ ಮುಕ್ತಾಯ ಹಂತ ಕಾಣಲಿದೆ. ಇದೀಗ ಗ್ರಾಮಸ್ಥರು ಶಾಸಕರನ್ನೂ ಅಭಿನಂದಿಸಿದ್ದಾರೆ.