ನಾಲ್ಕೇರಿಯಲ್ಲಿ ಹುಲಿ ದಾಳಿಗೆ ಹಸುಬಲಿ
ಪೊನ್ನಂಪೇಟೆ: ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ. ಗ್ರಾಮದ ರೈತ ಸದಾಶಿವ ಎಂಬ ವರ ಹಸುವಿನ ಮೇಲೆ ಶನಿವಾರ ಮುಂಜಾನೆ ಹುಲಿ ದಾಳಿ ನಡೆಸಿದ್ದು ಕೆಳಭಾಗವನ್ನು ಹುಲಿ ತಿಂದಿದೆ.
ಪೊನ್ನಂಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಪ್ರಕರಣ ಬರುತ್ತಿದ್ದು ಹಸುವಿನ ಮೇಲೆ ದಾಳಿ ಮಾಡಿರುವ ಹುಲಿ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದು, ಕೂಡಲೇ ಅರಣ್ಯ ಇಲಾಖೆ, ಕಾರ್ಯಾಚರಣೆ ನಡೆಸಬೇಕೆಂದು ಒತ್ತಾಯಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹುಲಿ ಸೆರೆಗೆ ಕಾರ್ಯಪ್ರವತ್ತರಾಗುವಂತೆ ಒತ್ತಾಯಿಸಿದ್ದಾರೆ.