ದಾರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಕಲ್ಲುಬಾಣೆ ಎಸ್.ಕೆ.ಎಸ್.ಬಿ.ವಿ ವತಿಯಿಂದ ಹಿಜ್ರಿ ಹೊಸ ವರುಷ ಆಚರಣೆ

Jun 17, 2026 - 19:53
 0  148
ದಾರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಕಲ್ಲುಬಾಣೆ ಎಸ್.ಕೆ.ಎಸ್.ಬಿ.ವಿ ವತಿಯಿಂದ ಹಿಜ್ರಿ ಹೊಸ ವರುಷ ಆಚರಣೆ

ವಿರಾಜಪೇಟೆ: ಕಲ್ಲುಬಾಣೆ ದಾರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಇಂದು ಸ್ಥಳೀಯ ಖತೀಬರು SKSBV ವ್ಯವಸ್ಥಾಪಕರಾದ ಎಂ.ಕೆ ಅಬ್ದುಲ್ ರಝಾಕ್ ಅಝಹರಿ ರವರ ಅಧ್ಯಕ್ಷತೆಯಲ್ಲಿ 1448ನೇ ಹಿಜ್ರಿ ವರ್ಷದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಪ್ರವಾದಿ ಸ.ಅ ರವರು ತನ್ನ ಜೀವನದಲ್ಲಿ ಸಮರ್ಪಿಸಿದ ತ್ಯಾಗ ಮತ್ತು ಸಹಿಷ್ಣುತೆ ಹಾಗೂ ಸಹೋದರತೆಯ ಸಂದೇಶವನ್ನು ಹಿಜ್ರ ನಮಗೆ ನೀಡುತ್ತದೆ ಎಂದು ಪ್ರಾಂಶುಪಾಲರಾದ ಎಂ.ತಮ್ಲೀಖ್ ದಾರಿಮಿ ಹೇಳಿದರು.

ಮದರಸ ಎಸ್ ಕೆ ಎಸ್ ಬಿ ವಿ ಸಂಚಾಲಕರಾದ ಯುಪಿ ಮುಸ್ತಫಾ ಫೈಝಿ ಮದರಸ ಅಧ್ಯಾಪಕರಾದ, ಹಕೀಂ ಹಿಶಾಮಿ, ಉಮ್ಮರ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಅಝಹರಿ ಹೊಸವರುಷದ ಶುಭಾಷಯವನ್ನು ಅರ್ಪಿಸಿದರು.

 ಎಸ್ ಕೆ ಎಸ್ ಬಿ ಅದ್ಯಕ್ಷರಾದ ಟಿ ಎಂ ಆದಿಲ್ ಸ್ವಾಗತಿಸಿದರು ನಂತರ ವಿದ್ಯಾರ್ಥಿಗಳು ಈ ಹಿಜ್ರಿ ವರುಷದ ಹೊಸ ವರುಷದಲ್ಲಿ ಹೊಸ ತೀರ್ಮಾನಗಳನ್ನು ಹೇಳಿದರು ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0