ಕುಂಬೂರಿನಲ್ಲಿ ನಿವೇಶನಕ್ಕಾಗಿ ಅಹೋರಾತ್ರಿ ಧರಣಿ;ಎಐಟಿಯುಸಿ ನಾಯಕರೊಬ್ಬರ ಹೇಳಿಕೆಗೆ ಖಂಡನೆ
admincoorgdaily

ಮಡಿಕೇರಿ: ಕುಂಬೂರು ಲಕ್ಕೇರಿ ಪೈಸಾರಿ ಸರ್ವೆ ನಂ.೧೨೫/೧ರಲ್ಲಿ ೬೦೦ ಕುಟುಂಬಗಳು ೧೨ ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿವೆ. ಎಐಟಿಯುಸಿ ನಾಯಕರೊಬ್ಬರು ಆದಿ ದ್ರಾವಿಡರಿಗೆ ಮಾತ್ರ, ಮಾದಾಪುರದವರಿಗೆ ಮಾತ್ರ ನಿವೇಶನ ಎಂದು ದ್ವಂದ್ವ ಹೇಳಿಕೆ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಬಹುಜನ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಜೆ.ಶಿವಪ್ಪ ಹೇಳಿದರು.
ಸಂಬಂಧಪಟ್ಟವರು ಎಐಟಿಯುಸಿ ನಾಯಕನ ಹೇಳಿಕೆಗೆ ಮನ್ನಣೆ ನೀಡಬಾರದು. ಶಾಸಕರು ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ಹೋರಾಟವನ್ನು ರಾಜ್ಯಮಟ್ಟದಲ್ಲಿ ನಡೆಸಲು ಸಿದ್ಧರಾಗುತ್ತೇವೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಬಹುಜನ ಕಾರ್ಮಿಕರ ಸಂಘದ ಪ್ರಮುಖರಾದ ಜಾನ್ಸಿ, ಜಾನಕಿ, ಮುತ್ತ, ಗೀತಾ, ಸುಂದರಿ ಇದ್ದರು.