ಓದಿನ ಜೊತೆ ಕೌಶಲ್ಯ ಬೆಳೆಸಿಕೊಳ್ಳಿರಿ: ಕೊಡಗು ವಿವಿ ಕುಲಪತಿಗಳು

Jun 10, 2026 - 15:17
 0  243
ಓದಿನ ಜೊತೆ ಕೌಶಲ್ಯ ಬೆಳೆಸಿಕೊಳ್ಳಿರಿ: ಕೊಡಗು ವಿವಿ ಕುಲಪತಿಗಳು

ವಿರಾಜಪೇಟೆ; ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರು.ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯ ರೂವಾರಿಗಳು, ಮೂರು ವರ್ಷದ ಪದವಿ ಪಡೆದು ತೆರಳುವ ನೀವು ಸಮಾಜ ನೀಡುವ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಓದುಗಾರಿಕೆ ಜೊತೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳಿರಿ. ಸಮಾಜದಲ್ಲಿ ಕೆಡುಕು ಉಂಟುಮಾಡದೆ ಸತ್ಪ್ರಜೆಗಳಾಗಿ ಬಾಳಿರಿ ಎಂದರು.

ಮುಖ್ಯ ಅತಿಥಿಗಳಾದ ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೆ.ಜೆ ದಿವಾಕರ ಕುಂದಲ್ಪಾಡಿ ರವರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಿರಿ, ಬಳಿಕ ಉದ್ಯೋಗ ಪಡೆಯಿರಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಿರಿ, ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಿ ರಿ ಎಂದು ಹಿತ ನುಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸರಸ್ವತಿ ಡಿ ಕೆ ರವರು ಮಾತನಾಡಿ ವಿದ್ಯಾರ್ಥಿಗಳು ಜೀವನ ಮೌಲ್ಯಗಳಾದ ನಿಷ್ಠೆ ಪ್ರಾಮಾಣಿಕತೆ ರೂಢಿಸಿಕೊಳ್ಳಿರಿ, ಕಾಲೇಜಿನೊಂದಿಗೆ ಒಡನಾಟ ಬೆಳೆಸಿಕೊಳ್ಳಿರಿ, ಸಮಾಜಕ್ಕೆ ಉತ್ತಮ ಮನುಷ್ಯರಾಗಿರಿ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಿರಿ ಎಂದು ಶುಭ ಹಾರೈಸಿದರು. 

ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಪ್ರೊ ಬಸವರಾಜು. ಕೆ ರವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಸಂಚಾಲಕರಾದ ಪ್ರೊ ದಯಾನಂದ ಕೆ ಸಿ ಸ್ವಾಗತಿಸಿದರು, ಕ್ರೀಡಾ ಸಮಿತಿ ಸಂಚಾಲಕರಾದ ಪ್ರೊ ಗುರುಪ್ರಸಾದ್ ಎನ್ ವಂದಿಸಿದರು. ಇದೇ ಸಂದರ್ಭದಲ್ಲಿ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ತೃತೀಯ ಬಿ ಎ ವಿದ್ಯಾರ್ಥಿನಿ ಕು. ಕೀರ್ತನ ಪಡೆದರು. ವರ್ಷದ ಅತ್ಯುತ್ತಮ ವಿದ್ಯಾರ್ಥಿ ನಾಯಕ ಪ್ರಶಸ್ತಿಯನ್ನು ತೃತೀಯ ಬಿಎ ವಿದ್ಯಾರ್ಥಿ ನಿಶಾನ್ ಜೋಸೆಫ್ ವರ್ಷದ ಅತ್ಯುತ್ತಮ ಶ್ರದ್ಧಾ ವಿದ್ಯಾರ್ಥಿಯಾಗಿ ಕು. ದರ್ಶನ್, ವರ್ಷದ ಅತ್ಯುತ್ತಮ ಕ್ರೀಡಾ ಪಟುವಾಗಿ ಕು. ರಸೀನಾ, ವರ್ಷದ ಅತ್ಯುತ್ತಮ ಸಾಂಸ್ಕೃತಿಕ ಪ್ರತಿಭೆಯಾಗಿ ಕು.ಸುಹೈರಾ ಆಯ್ಕೆಯಾದರು. ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂಸೇವಕರಾಗಿ ತೃತೀಯ ಬಿಎ ವಿದ್ಯಾರ್ಥಿಗಳಾದ ಕು. ಮಂಜು, ಕು.ಚಂದ್ರಶೇಖರ, ಪುನೀತ್ ಕು.ಕುಮಾರ್ ಕು. ಸೋನಾ ನಿವಿತಾ ಆಯ್ಕೆಯಾಗಿದ್ದು ಇವರೆಲ್ಲರಿಗೂ ಸನ್ಮಾನಿಸಲಾಯಿತು. 

ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು ಹಾಗೂ ಕಾಲೇಜಿನ ವಾರ್ಷಿಕ ಸಂಚಿಕೆಯಾದ ವಿರಾಜಮಾರ್ಗ ವನ್ನು ಅತಿಥಿಗಳಿಂದ ಬಿಡುಗಡೆಗೊಳಿಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0