ವಿಶ್ವ ಫೋಟೋಗ್ರಾಫಿ ದಿನಾಚರಣೆಯ ಪ್ರಯುಕ್ತ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಾಗ್ರಿಗಳ ವಿತರಣೆ

ವಿಶ್ವ ಫೋಟೋಗ್ರಾಫಿ ದಿನಾಚರಣೆಯ ಪ್ರಯುಕ್ತ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಾಗ್ರಿಗಳ ವಿತರಣೆ

ವಿರಾಜಪೇಟೆ:186 ನೇ ವಿಶ್ವ ಛಾಯಾಚಿತ್ರ ದಿನವನ್ನು ದ.ಕೊಡಗು ಛಾಯಾಚಿತ್ರಗಾರರ ಸಂಘದ ವತಿಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಚೆನ್ನಂಗಿ ಗ್ರಾಮದ ಬಸವನ ಹಳ್ಳಿಯ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಆಚರಿಸಿದರು. ಆಶಯ ಶಾಲೆಯ ಮಕ್ಕಳಿಗೆ ವಿವಿಧ ರೀತಿಯ ಕ್ರೀಡಾ ಸಾಮಾಗ್ರಿಗಳನ್ನು ವಿತರಣೆ ಮಾಡಿ ನಂತರ ಮಕ್ಕಳ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ರವೀಂದ್ರ ಅವರು ಮಾತನಾಡಿ,ನಮ್ಮ ಸಂಘದ ವತಿಯಿಂದ ವಿಶ್ವ ಛಾಯಾಚಿತ್ರ ಗಾರರ ಸಂಘದ ವತಿಯಿಂದ ಪ್ರತಿವರ್ಷ ವಿವಿಧ ಶಾಲೆ ಗಳು ಆಶ್ರಮಗಳು, ಬಡ ವಿದ್ಯಾರ್ಥಿ ಗಳ ವಸತಿ ಶಾಲೆ ಗಳಿಗೆ ಅಗತ್ಯವಾದ ವಸ್ತುಗಳನ್ನು ನೀಡಲು ಆರಂಭಿಸಿದ್ದೇವೆ.ಅದೇ ರೀತಿ ಈ ವರ್ಷವು ವಾಲ್ಮೀಕಿ ಆಶ್ರಮ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ನಮ್ಮ ಸಂಘದ ವತಿಯಿಂದ ಅಗತ್ಯವಾದ ವಸ್ತುಗಳನ್ನು ನೀಡಿದ್ದೇವೆ ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ರಾಮ್ ದಾಸ್ ಅವರು ಸಂಘ ನಡೆದು ಬಂದ ರೀತಿಯ ಮಾಹಿತಿ ನೀಡಿದರು.ಸಂಘದ ಸದಸ್ಯರಾದ ಪ್ರಾಸ್ತಾವಿಕವಾಗಿ ಮಾತನಾಡಿದರ. ದ.ಕೊಡಗು ಛಾಯಾಚಿತ್ರ ಗ್ರಾರರ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.