ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಕೇರಳ ಯಾತ್ರೆಯನ್ನು ಯಶಸ್ವಿಗೊಳಿಸಲು ಜಿಲ್ಲಾ ಸುನ್ನಿ ಸಂಘಟನೆಗಳ ಕರೆ
admincoorgdaily

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ರವರು ಈಗಾಗಲೇ ಎರಡು ಕೇರಳ ಯಾತ್ರೆಗಳು ಹಾಗೂ 'ಮನುಕುಲವನ್ನು ಗೌರವಿಸಿ' ಎಂಬ ಶೀರ್ಷಿಕೆಯಲ್ಲಿ ಕರ್ನಾಟಕ ಯಾತ್ರೆಯನ್ನು ಬಹಳ ಯಶಸ್ವಿಯಾಗಿ ನಡೆಸಿದ್ದು, ಇದೀಗ 2026ನೇ ಜನವರಿ 1ರಿಂದ 16ರವರೆಗೆ 'ಮನುಷ್ಯರೊಂದಿಗೆ' ಎಂಬ ಧ್ಯೇಯ ವಾಕ್ಯದೊಂದಿಗೆ ಮುನ್ನಡೆಸುವ ಮೂರನೇ ಕೇರಳ ಯಾತ್ರೆಯನ್ನು ವಿಜಯಗೊಳಿಸಲು ಕೊಡಗಿನ ಸುನ್ನೀ ಸಂಘಟನೆಗಳು ಕರೆ ನೀಡಿವೆ.
ಜನವರಿ 1ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ದರ್ಗಾ ಝಿಯಾರತ್ ನಂತರ ಕಾಸರಗೋಡುವಿನಲ್ಲಿ ಯಾತ್ರೆಯ ಉದ್ಘಾಟನೆ ನಡೆಯಲಿದೆ. ಬಳಿಕ ಎಲ್ಲಾ ಜಿಲ್ಲೆಗಳನ್ನೂ ಕ್ರಮಿಸಿ, ಜನವರಿ 16ರಂದು ತಿರುವನಂತಪುರಂನ ತಾಜುಲ್ ಉಲಮಾ ನಗರದಲ್ಲಿ ಯಾತ್ರೆ ಸಮಾಪನಗೊಳ್ಳಲಿದೆ.
ಸರ್ವಧರ್ಮೀಯರನ್ನು ಹಾಗೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿರುವ ಸರ್ವರನ್ನೂ ಸೇರಿಸಿ ನಡೆಯುವ ಮೂರನೇ ಕೇರಳ ಯಾತ್ರೆಯಲ್ಲಿ ಜಿಲ್ಲೆಯ ಸರ್ವರೂ ಯಾವುದಾದರೊಂದು ಕೇಂದ್ರಕ್ಕೆ ತೆರಳಿ ಮಾನವತಾ ಮಹಾಸಂಗಮಕ್ಕೆ ಬೆಂಬಲವನ್ನು ನೀಡಿ ಯಶಸ್ವಿಗೊಳಿಸಲು ಎಸ್.ವೈ.ಎಸ್.,ಎಸ್.ಜೆ.ಎಂ ಹಾಗೂ ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿಗಳು ಕರೆ ನೀಡಿದೆ.