ದೀಪಾವಳಿ ಪ್ರಯುಕ್ತ ರಾಜರಾಜೇಶ್ವರಿ ದೇವಾಲಯದಲ್ಲಿ ಅ.21ರಂದು ದೀಪೋತ್ಸವ ಕಾರ್ಯಕ್ರಮ

ದೀಪಾವಳಿ ಪ್ರಯುಕ್ತ ರಾಜರಾಜೇಶ್ವರಿ ದೇವಾಲಯದಲ್ಲಿ ಅ.21ರಂದು ದೀಪೋತ್ಸವ ಕಾರ್ಯಕ್ರಮ

ಮಡಿಕೇರಿ: ದೀಪಾವಳಿ ಪ್ರಯುಕ್ತ ರಾಜರಾಜೇಶ್ವರಿ ದೇವಾಲಯದಲ್ಲಿ ಅ.೨೧ರಂದು ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಧರ್ಮದರ್ಶಿ ಗೋವಿಂದಸ್ವಾಮಿ ಮನವಿ ಮಾಡಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾತ್ರಿ ೭ ಗಂಟೆಗೆ ಕಳಸ ಪೂಜೆ ನಡೆಯಲಿದೆ.

ನಂತರ ೮ ಗಂಟೆಗೆ ಅನ್ನದಾನ, ೯ ಗಂಟೆಗೆ ತಾಯಿಯ ದರ್ಶನವಾಗಲಿದೆ. ೯.೩೦ ಗಂಟೆಗೆ ದೀಪೋತ್ಸವ ಆರಂಭವಾಗಲಿದೆ. ದೋಷ ಮತ್ತು ಸಂಕಷ್ಟ ಪರಿಹಾರಕ್ಕಾಗಿ ದೀಪೋತ್ಸವದಲ್ಲಿ ೧೦೮ ಎಳ್ಳುಬತ್ತಿಯನ್ನು ಹಚ್ಚಲಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದೇವಾಲಯ ಸಮಿತಿ ಟ್ರಸ್ಟಿಗಳಾದ ಸಚ್ಚಿನ್ ವಾಸುದೇವ್, ಕಿರಣ್, ಭಕ್ತರಾದ ಹರೀಶ್, ಚುಮ್ಮಿದೇವಯ್ಯ ಇದ್ದರು.