ಅನಾರೋಗ್ಯದಿಂದ ಬಳಲುತ್ತಿದ್ದ ಚೌಡ್ಲು ಗ್ರಾಮದ ರಾಧಾಮಣಿ ಮನೆಗೆ ಡಾ.ಮಂತರ್ ಗೌಡ ಭೇಟಿ
ಸೋಮವಾರಪೇಟೆ: ತಾಲೂಕಿನ ಚೌಡ್ಲು ಗ್ರಾಮದ ಓ ಎಲ್ ವಿ ಕಾನ್ವೆಂಟ್ ರಸ್ತೆಯ ನಿವಾಸಿ ಧರ್ಮ ಅವರ ಪತ್ನಿ ರಾಧಾಮಣಿ ರವರು ಅನಾರೋಗ್ಯದಿಂದ ಬಳಲುತ್ತಿದ್ದು ಶಾಸಕರಾದ ಶ್ರೀ ಡಾ. ಮಂತರ್ ಗೌಡ ರವರು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಡಾ. ಮಂತರ್ ಗೌಡ ಅಭಿಮಾನಿ ಬಳಗದ ಅಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಭೋವಿ ಜನಾಂಗ ಘಟಕದ ಜಿಲ್ಲಾಧ್ಯಕ್ಷರಾದ ಸುಜಿತ್ ರವರು ಉಪಸ್ಥಿತರಿದ್ದರು.