ದುಬೈಯಲ್ಲಿ ಕುಂಜಿಲ ಪೈನರಿ ಯುಎಇ ಸಮಿತಿ ವತಿಯಿಂದ ಅದ್ಧೂರಿಯಾಗಿ ನಡೆದ ಈದ್-ಮಿಲಾದ್
ದುಬೈ:ಸಂಯುಕ್ತ ಅರಬ್ ಸಂಸ್ತಾನದಲ್ಲಿರುವ ಕೊಡಗಿನ ಕುಂಜಿಲ ಜಮಾಅತ್ ಅನಿವಾಸಿ ಗ್ರಾಮಸ್ಥರ ಸಂಘಟನೆಯಾದ ಕುಂಜಿಲ ಪೈನರಿ ಯುಎಇ ಸಮಿತಿ ವತಿಯಿಂದ ಆಗಸ್ಟ್ 30 ರಂದು ದೇರಾ ದುಬೈಯಲ್ಲಿರುವ ಟ್ರಿಪಲ್ ಹೈಟ್ ಹೋಟೆಲ್ ಸಭಾಂಗಣದಲ್ಲಿ ಪ್ರವಾದಿ ಪೈಗಂಬರ್ ಮೊಹಮ್ಮದ್ (ಸ.ಅ) ಅವರ 1500ನೇ ಜನ್ಮದಿನಾಚರಣೆಯು ಅದ್ಧೂರಿಯಾಗಿ ನಡೆಯಿತು. ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂ ಉಸ್ತಾದ್ ಕುಂಜಿಲ ಅಧ್ಯಕ್ಷತೆ ವಹಿಸಿದ್ದರು.
ರಾತ್ರಿ 11 ಗಂಟೆಗೆ ಸಯ್ಯದ್ ಮೊಹಮ್ಮದ್ ಹೈದ್ರೋಸಿ ಹುದವಿ ತಂಙಳ್ ಅವರ ದುಆದೊಂದಿಗೆ ಮೀಲಾದ್ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು. ಹಮೀದ್ ಸಖಾಫಿ ಉಸ್ತಾದ್ ಪುದರೇಕಾರಂಡ, ಮುನೀರ್ ಮಿಸ್ಬಾಯ್ ಉಸ್ತಾದ್ ಬಾರಿಕೇರ, ಮತ್ತು ಷರೀಫ್ ಲತೀಫ್ ಉಸ್ತಾದ್ ಅವರು ಮೌಲಿದ್ ಮಜ್ಲಿಸ್ ಗೆ ನೇತೃತ್ವ ವಹಿಸಿದ್ದರು.ಸಮಿತಿ ಸದಸ್ಯರಾದ ನಾಸಿರ್ ಪಯಡತಂಡ ಅವರು ಅತಿಥಿಗಳೊಂದಿಗೆ ಎಲ್ಲರನ್ನು ವೇದಿಕೆಗೆ ಮತ್ತು ಸಭೆಗೆ ಸ್ವಾಗತಿಸಿದರು.ಕೆಸಿಎಫ್ ಜಲೀಲ್ ನಿಜಾಮಿ ಉಸ್ತಾದರು ಮುಖ್ಯ ಪ್ರಭಾಷಣ ಮಾಡಿದರು.ಫಾರೂಕ್ ಪುದರೇಕಾರಂಡ ಹಾಗೂ ಹಾಫಿಜ್ ಹಾಶಿರ್ ಅಲ್ ಅಝರಿ ಉಸ್ತಾದರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಿತು. ಯುಎಇ ಪೈನರಿ ಸಮಿತಿ ಕಾರ್ಯದರ್ಶಿಗಳಾದ ನಿಜ್ಹಾರ್ ಕುಂಡಂಡ ಅವರು ಆಗಮಿಸಿದ ಅತಿಥಿಗಳಿಗೆ ಮತ್ತು ಸಭಿಕರಿಗೆ ವಂದನಾರ್ಪಣೆಯನ್ನು ಸಲ್ಲಿಸಿದರು ಎಂದು ರಫೀಕಲಿ ಕುಂಡಂಡ ಅವರು ಕೂರ್ಗ್ ಡೈಲಿಗೆ ತಿಳಿಸಿದ್ದಾರೆ.