Kodagu

5ವರ್ಷದ ಬಳಿಕ ಮಾಜಿ ಸೈನಿಕರ ಅದಾಲತ್: ಜಿಲ್ಲಾಧಿಕಾರಿ ಸೋಮಶೇಖರ್‌ಗೆ ಸಂಘದ ಶ್ಲಾಘನೆ

admincoorgdaily

5ವರ್ಷದ ಬಳಿಕ ಮಾಜಿ ಸೈನಿಕರ ಅದಾಲತ್: ಜಿಲ್ಲಾಧಿಕಾರಿ ಸೋಮಶೇಖರ್‌ಗೆ ಸಂಘದ ಶ್ಲಾಘನೆ

ಮಡಿಕೇರಿ: 5 ವರ್ಷಗಳ ನಂತರ ಜಿಲ್ಲಾಧಿಕಾರಿ ಸೋಮಶೇಖರ್ ಮಾಜಿ ಸೈನಿಕರ ಅದಾಲತ್ ನಡೆಸಿ ಕುಂದುಕೊರತೆ ಆಲಿಸಿದ್ದಕ್ಕೆ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ ಶ್ಲಾಘಿಸಿದೆ.

ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇ.ಜ ಬಿ.ಎ.ಕಾರ್ಯಪ್ಪ ಅವರು ಮಾತನಾಡಿ, ೨೦ ವರ್ಷಗಳಿಂದ ೧೫೦೦ ಮಾಜಿ ಸೈನಿಕರ ನಿವೇಶನ ಅರ್ಜಿಗಳು ಬಾಕಿಯಿದ್ದು, ಶೀಘ್ರದಲ್ಲಿ ವಿಲೇವಾರಿ ಮಾಡುವಂತಾಗಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಕಾಡಾನೆ ಹಾವಳಿಯಿಂದ ಕಾಫಿ, ಅಡಿಕೆ ಬೆಳೆ ನಾಶವಾಗುತ್ತಿದ್ದು, ಬೆಳೆ ಹಾನಿ ಪರಿಹಾರ ಹೆಚ್ಚಳಕ್ಕೆ ಹಾಗೂ ಅರಣ್ಯದಲ್ಲಿ ಆನೆಗಳಿಗೆ ಆಹಾರ-ನೀರಿನ ವ್ಯವಸ್ಥೆ, ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಆಗ್ರಹಿಸಿದರು. ಸಂಘದ ಕಾರ್ಯದರ್ಶಿ ಓ.ಎಸ್.ಚಿಂಗಪ್ಪ, ಪ್ರಮುಖರಾದ ಮಂದಣ್ಣ, ಹರೀಶ್, ಗಣಪತಿ, ಬಿ.ಈರಪ್ಪ ಇದ್ದರು.