ಮಡಿಕೇರಿ ಭೋದಕ ಆಸ್ಪತ್ರೆಗೆ (ಜಿಲ್ಲಾಸ್ಪತ್ರೆ) 41 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ನಾಳೆ ಶಿಲಾನ್ಯಾಸ: ಅನುದಾನ ಒದಗಿಸಿದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ ಶಾಸಕ ಡಾ.ಮಂತರ್ ಗೌಡ
ಮಡಿಕೇರಿ:41 ಕೋಟಿ ರೂಪಾಯಿ ವೆಚ್ಚದಲ್ಲಿ 450 ಹಾಸಿಗೆ ಸಾಮರ್ಥ್ಯದ ಮಡಿಕೇರಿಯ ಭೋಧಕ ಆಸ್ಪತ್ರೆ ಕಟ್ಟಡದ ಉಳಿಕೆ ಮತ್ತು ಹೆಚ್ಚುವರಿ (ಎರಡನೇ ಹಂತ) ಕಾಮಗಾರಿಯ ಶಿಲಾನ್ಯಾಸವನ್ನು ಗಣ್ಯರ ಸಮ್ಮುಖದಲ್ಲಿ ನಾಳೆ ನೇರವೇರಿಸುತ್ತಿದ್ದು, ಈ ಕಾಮಗಾರಿಗಳಿಗೆ ವಿಶೇಷ ಒತ್ತು ನೀಡಿ ಅನುದಾನ ಒದಗಿಸಿದ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ರವರಿಗೆ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಭೋಸರಾಜು ರವರಿಗೆ ವೈಯಕ್ತಿಕವಾಗಿ ಹಾಗೂ ಕೊಡಗು ಜಿಲ್ಲೆಯ ಜನತೆಯ ಪರವಾಗಿ ಶಾಸಕ ಡಾ.ಮಂತರ್ ಗೌಡ ರವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.