ಬಂಟರ ಭವನಕ್ಕೆ ಶಿಲಾನ್ಯಾಸ
admincoorgdaily

ಮಡಿಕೇರಿ: ಕೊಡಗು ಬಂಟರ ಭವನ ನಿರ್ಮಾಣಕ್ಕೆ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.
ಎಂಎಲ್‌ಸಿ ಸುಜಾ ಕುಶಾಲಪ್ಪ ರೂ.೫ ಲಕ್ಷ ಅನುದಾನ ಘೋಷಿಸಿದರೆ, ಶಾಸಕ ಎ.ಎಸ್.ಪೊನ್ನಣ್ಣ ಸಹಕಾರದ ಭರವಸೆ ನೀಡಿದರು.
ಜಾಗದಾನಿ ದಿ.ಪ್ರೇಮನಾಥ ಪೂಂಜಾ ಅವರಿಗೆ ಮರಣೋತ್ತರ ಬಂಟ ಬಹಾದ್ದೂರ್ ಬಿರುದು ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಮಾಜಿ ಶಾಸಕ ಅಪ್ಪಚ್ಚು ರಂಜನ್, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಗಿರೀಶ್ ನೆಲ್ಲಾರು, ನವಿ ಮುಂಬೈನ ಉದ್ಯಮಿ ಕುಸುಮಾಧರ ಶೆಟ್ಟಿ, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಗನ್ನಾಥ್ ಚೌಟ, ಬಂಟರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ.ಜಗದೀಶ್ ರೈ, ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ ಮತ್ತಿತರರು ಉಪಸ್ಥಿತರಿದ್ದರು.