ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರಾಗಿ ಜರ್ಮಿಡಿಸೋಜಾ ಅವಿರೋಧ ಆಯ್ಕೆ

ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರಾಗಿ ಜರ್ಮಿಡಿಸೋಜಾ ಅವಿರೋಧ ಆಯ್ಕೆ

ಸುಂಟಿಕೊಪ್ಪ : ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡನೇ ಅವಧಿಗೆ ಅಧ್ಯಕ್ಷರಾಗಿ ಜರ್ಮಿಡಿಸೋಜ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಸಂಘದ ಉಪಾಧ್ಯಕ್ಷೆ ರಮ್ಯಾ ಮೋಹನ್, ಕುಶಾಲನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ನಿರ್ದೇಶಕರಾದ ಕ್ಲೈವ ಪೊನ್ನಪ್ಪ, ಡಿ.ಬಿ.ಚೆಂಗಪ್ಪ, ಲೀಲಾವತಿ, ಗಂಗಾಧರ್, ಡಾ.ಶಶಿಕಾಂತ ರೈ, ದಯಾನಂದ, ಕೆ.ಆರ್.ಮಂಜುನಾಥ್, ಕೆ.ಪಿ.ಜಗನ್ನಾತ್, ದಯಾನಂದ, ಪಿ.ಪಿ.ಉದಯಕುಮಾರ್, ಮಾಜಿ ಅಧ್ಯಕ್ಷರಾದ ಕೆ.ಎಸ್.ಮಂಜುನಾಥ್, ಸಂಘದ ಮುಖ್ಯ ನಿರ್ವಹಣಾಧಿಕಾರಿ ಸುಮಿತ್ರಾ ಇದ್ದರು. ಚುನಾವಣಾ ಅಧಿಕಾರಿಯಾಗಿ ಜಿಲ್ಲಾ ಸಹಕಾರ ಇಲಾಖೆಯ ಪಟ್ಟಡ ಮೋಹನ್ ಕಾರ್ಯನಿರ್ವಹಿಸಿದರು.