ಮೈಸೂರಿನಲ್ಲಿ ಗೋಜು ವಾರಿಯರ್ಸ್ ಕಪ್ 2026 ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್
ವಿರಾಜಪೇಟೆ: ಕರಾಟೆ ಡೊ ಗೋಜುಕನ್ ಅಸೋಸಿಯೇಷನ್ ಆಯೋಜಿಸಿದ ಮುಕ್ತ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ವಿರಾಜಪೇಟೆಯ ಆರ್ಜಿ ಗ್ರಾಮದ ಪೆರುಂಬಾಡಿಯ ಜೆನ್ ಸಿಟೋರಿಯೋ ಸ್ಕೂಲ್ ಆಫ್ ಇಂಡಿಯಾ ಕರಾಟೆ ಶಾಲೆಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕರಾಟೆ ಡೊ ಗೋಜುಕನ್ ಅಸೋಸಿಯೇಷನ್ ವತಿಯಿಂದ "ಗೋಜು ವಾರಿಯರ್ಸ್ ಕಪ್ 2026" ಮುಕ್ತ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ಮೈಸೂರಿನ ಸಿದ್ದಾರ್ಥನಗರದ ಟೆರೇಶಿಯನ್ ಕಾಲೇಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಕಾರ್ಯಕ್ರಮದ ಸಂಘಟಕ ಹಾಗೂ ಗೋಜುಕಾನ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ, 6ನೇ ಡಾನ್ ಬ್ಲಾಕ್ ಬೆಲ್ಟ್ ಶಿಹಾನ್ ದೀಪಕ್ ಕುಮಾರ್ ಎಸ್ ಮಾತನಾಡಿ, "ಕರಾಟೆ ಕ್ರೀಡಾಪಟುಗಳಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಇದು ಅತ್ಯುತ್ತಮ ವೇದಿಕೆ. ಕರ್ನಾಟಕದ ಮೂಲೆ ಮೂಲೆಯಿಂದ ಕರಾಟೆಪಟುಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಬಾಲಕರ ಕುಮಿತೆ ವಿಭಾಗದಲ್ಲಿ ಕಾರ್ತಿಕ್ ಕೆ.ಎಚ್. ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಸೊಧಾನ್ ಕುಮಿತೆಯಲ್ಲಿ ಬೆಳ್ಳಿ, ಕತಾ ದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಲಕ್ಸೀಶ್ ಬಿ.ಎನ್ ಕುಮಿತೆಯಲ್ಲಿ ಹಾಗೂ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ, ದವನ್ ಬಿ.ವಿ. ಕುಮಿತೆಯಲ್ಲಿ ಕಂಚು, ಕಟಾ ದಲ್ಲಿ ಕಂಚು ಪಡೆದಿದ್ದಾರೆ. ಗಿಲನ್ ಬಿ.ಬಿ.ಕುಮಿತೆ ಹಾಗೂ ಕಟಾದಲ್ಲಿ ಕಂಚು, ಆದರ್ಶ ಕೆ.ಬಿ. ಕುಮಿತೆಯಲ್ಲಿ ಬೆಳ್ಳಿ, ಕಟಾದಲ್ಲಿ ಕಂಚು, ಕೃತಿಕ್ ಎಂ ಕಟಾದಲ್ಲಿ ಬೆಳ್ಳಿ, ಡ್ಯಾನಿಶ್ ಕುಮಿತೆಯಲ್ಲಿ ಕಂಚು, ಕಟ್ಟದಲ್ಲಿ ಬೆಳ್ಳಿ, ಸಮಿತ್ ಪಿ.ಬಿ ಕುಮಿತೆಯಲ್ಲಿ ಬೆಳ್ಳಿ, ಕಟ್ಟದಲ್ಲಿ ಬೆಳ್ಳಿ, ಆದಿ ದೇವು ಎನ್.ಎ. ಕಟ್ಟದಲ್ಲಿ ಕಂಚು, ಕೃಶಾಂಕ್ ಎಂ.ಎನ್. ಕುಮಿತೆಯಲ್ಲಿ ಕಂಚು, ಕಟ್ಟದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಬಾಲಕಿಯರ ಕುಮಿತ್ತೆ ವಿಭಾಗದಲ್ಲಿ ಧನುಶ್ರೀ ಬೆಳ್ಳಿ ಪದಕ, ಕಟ್ಟ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಗಾನವಿ ಎನ್ ಎಲ್ ಕುಮಿತೆಯಲ್ಲಿ ಚಿನ್ನದ ಪದಕ, ಕಟ್ಟದಲ್ಲಿ ಬೆಳ್ಳಿ, ಬಿಂದ್ಯಾಯ ಪಿ.ಬಿ. ಕುಮಿತೆಯಲ್ಲಿ ಬೆಳ್ಳಿ, ಕಟ್ಟದಲ್ಲಿ ಬೆಳ್ಳಿ ಪದಕ, ಸಾನವಿ ಪಿ.ಬಿ ಕುಮಿತೆಯಲ್ಲಿ ಬೆಳ್ಳಿ ಪದಕ, ಕಟ್ಟ ಕಂಚು, ಚೈತನ್ಯ ಅವರು ಕಟ್ಟದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಇವರಿಗೆ ಸೆನ್ಸಾಯಿ ಶಿವಪ್ಪ ಅವರು ತರಬೇತಿ ನೀಡಿದ್ದಾರೆ.

