ಗೋಣಿಕೊಪ್ಪ:ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಆಚಾರ-ವಿಚಾರಗಳನ್ನು ತಿಳಿಸಿಕೊಡುವ ಅವಶ್ಯಕತೆ ಇದೆ: ಶಾಸಕ ಎ.ಎಸ್ ಪೊನ್ನಣ್ಣ

ಗೋಣಿಕೊಪ್ಪ:ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಆಚಾರ-ವಿಚಾರಗಳನ್ನು ತಿಳಿಸಿಕೊಡುವ ಅವಶ್ಯಕತೆ ಇದೆ: ಶಾಸಕ ಎ.ಎಸ್ ಪೊನ್ನಣ್ಣ

ಪೊನ್ನಂಪೇಟೆ:,ತಾಲೂಕಿನ‌ ಗೋಣಿಕೊಪ್ಪಲುವಿನ ಪಾಮ್ ವ್ಯಾಲಿ ರೆಸಾರ್ಟ್ ನಲ್ಲಿ, ಕಾವೇರಿ ಪೊಮ್ಮಕ್ಕಡ ಕೂಟ ಆಯೋಜಿಸಿದ ಕಕ್ಕಡ ನಮ್ಮೆ ಕಾರ್ಯಕ್ರಮದಲ್ಲಿ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಬಳಿಕ ಮಾತನಾಡಿದ ಶಾಸಕರು, ಕಾವೇರಿ ಪೊಮ್ಮಕ್ಕಡ ಕೂಟವು, ಹಲವಾರು ವರ್ಷಗಳಿಂದ ಕೊಡಗಿನ ಹಾಗೂ ಕೊಡವರ ಸಂಸ್ಕೃತಿಯನ್ನು ಪೋಷಿಸುತ್ತಾ ಬೆಳೆಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಆಚರಣೆಗಳನ್ನು ಮುಂದುವರಿಸಲು ಅನುಕೂಲವಾಗುತ್ತದೆ ಮಾತ್ರವಲ್ಲದೆ ಮಹಿಳೆಯರು ಸಹ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಲು ಸಹಕಾರಿಯಾಗುತ್ತದೆ ಎಂದು ಬಣ್ಣಿಸಿದರು. ಆಯೋಜಕರಿಗೆ ಶುಭಕೋರಿದ ಶಾಸಕರು, ಸಮುದಾಯಕ್ಕೆ ಇವರ ಕೊಡುಗೆ ಹೀಗೆ ಮುಂದುವರೆದು ಎಲ್ಲರಿಗೂ ಮಾದರಿಯಾಗುವಂತೆ ಆಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷರಾದ ಕೊಟ್ಟಂಗಡ ವಿಜು ದೇವಯ್ಯ, ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.