ಗೋಣಿಕೊಪ್ಪ:ವಿದ್ಯಾನಗರದಲ್ಲಿ ನೂತನ ಬಸ್ಸ್ ತಂಗುದಾಣ ಉದ್ಘಾಟಿಸಿದ ಶಾಸಕ ಎ.ಎಸ್ ಪೊನ್ನಣ್ಣ
ವಿರಾಜಪೇಟೆ: ವಿಧಾನಸಭಾ ಕ್ಷೇತ್ರದ, ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲುವಿನ ವಿದ್ಯಾನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ತಂಗುದಾಣವನ್ನು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಉದ್ಘಾಟಿಸಿದರು. 6ಲಕ್ಷ 50ಸಾವಿರ ರೂ ಅನುದಾನದಲ್ಲಿ ನಿರ್ಮಾಣಗೊಂಡ ಬಸ್ ತಂಗುದಾಣವು, ಸ್ಥಳೀಯ ಪ್ರಯಾಣಿಕರಿಗೆ ಅನುಕೂಲ ಮಾಡುವುದರೊಂದಿಗೆ, ಮಳೆ ಹಾಗೂ ಬಿಸಿಲಿನ ತಾಪದ ರಕ್ಷಣೆ ಒದಗಿಸುವಲ್ಲಿ ಸಹಕಾರಿಯಾಗಲಿದೆ. ಈ ಭಾಗದ ಅನೇಕ ಜನರು ಹಾಗೂ ಕಾರ್ಮಿಕರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಬಸ್ ಪ್ರಯಾಣವನ್ನೇ ಅವಲಂಬಿಸುತ್ತಿದ್ದು, ಇಂತಹ ಪ್ರಯಾಣಿಕರಿಗೆ ಇದು ಅತ್ಯಂತ ಅನುಕೂಲ ಒದಗಿಸಲಿದೆ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರಾದ ಕುಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳಾ, ಕೋಲಿರ ಜಯ, ವಾಸು, ನಾಯಂದಿರ ಶಿವಾಜಿ ನಗರ ಉಪಾಧ್ಯಕ್ಷರು, ಧ್ಯಾನ್ ಸುಬ್ಬಯ್ಯ, ಕುಸುಮ, ಧನ್ಯ, ಗಣೇಶ್ ಕೆ ಎಂ, ಗ್ಯಾರಂಟಿ ಅನುಷ್ಠಾನ ಸದಸ್ಯರು ಖಾಲಿದ್, ಪ್ರಮುಖರು ಉಪಸ್ಥಿತರಿದ್ದರು.