ವಾಹನ ದಟ್ಟಣೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯ ಪರಿಹಾರಕ್ಕೆ ಮಾರ್ಗೋಪಾಯ ಕಂಡುಕೊಳ್ಳಲಾಗುವುದು;ಗೋಣಿಕೊಪ್ಪ ಠಾಣಾಧಿಕಾರಿ ಕಾಳೇಗೌಡ ಭರವಸೆ

May 31, 2026 - 12:04
May 31, 2026 - 12:05
 0  339
ವಾಹನ ದಟ್ಟಣೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯ ಪರಿಹಾರಕ್ಕೆ ಮಾರ್ಗೋಪಾಯ ಕಂಡುಕೊಳ್ಳಲಾಗುವುದು;ಗೋಣಿಕೊಪ್ಪ  ಠಾಣಾಧಿಕಾರಿ ಕಾಳೇಗೌಡ ಭರವಸೆ

ಗೋಣಿಕೊಪ್ಪ: ಇಲ್ಲಿನ ವಾಹನ ದಟ್ಟಣೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯ ಪರಿಹಾರಕ್ಕೆ ಮಾರ್ಗೋಪಾಯ ಕಂಡುಕೊಳ್ಳಲಾಗುವುದು ಮತ್ತು ಪಟ್ಟಣದಲ್ಲಿ ಕಾಡುತ್ತಿರುವ ಇನ್ನೀತರ ಕಾನೂನು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಗೋಣಿಕೊಪ್ಪ ಠಾಣಾಧಿಕಾರಿ ಕಾಳೇಗೌಡ ಭರವಸೆ ನೀಡಿದರು.

 ನಗರದ ಸಮಸ್ಯೆಗಳ ಪರಿಹಾರಕ್ಕೆ ಮಾದ್ಯಮದವರೊಂದಿಗೆ ಗೋಣಿಕೊಪ್ಪ ಠಾಣೆಯಲ್ಲಿ ನಡೆಸಿದ ಸ್ನೇಹ ಸಮ್ಮಿಲನ ಸಭೆಯಲ್ಲಿ ಮಾತನಾಡಿದರು. 

 ಸಭೆಯಲ್ಲಿ ಚರ್ಚಿತವಾದ ನಗರದಲ್ಲಿ ಗಂಭೀರವಾಗಿ ಬಳಲುತ್ತಿರುವ ಸಮಸ್ಯೆಗಳಿಗೆ ತಕ್ಷಣ ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ತಿಳಿಸಿದರು. 

ಪತ್ರಕರ್ತರು ಸಭೆಯಲ್ಲಿ ನಗರ ಅತಿ ಹೆಚ್ಚು ಕಾಡುತ್ತಿರುವ ಸಮಸ್ಯೆಗಳನ್ನು ಠಾಣಾಧಿಕಾರಿಗೆ ಮಾಹಿತಿಯನ್ನು ಒದಗಿಸಿದರು. 

ಯುವಕರು ಹೆಲ್ಮೆಟ್ ಇಲ್ಲದೇ ದ್ವಿಚಕ್ರ ಚಾಲನೆ, ಆಟೋ ಚಾಲಕರು ಚಾಲನೆ ನಿಯಂತ್ರಣ ಪಾಲಿಸದೇ ಇರುವುದು, ಬೆಳಗ್ಗಿನ ಜಾವವೇ ಮಧ್ಯ ಮಾರಾಟ, ಎರಡಂಕ್ಕಿ ಲಾಟರಿ, ವಾಹನ ನಿಲುಗಡೆಯ ಬಗೆಯ ಪರಿಹಾರಗಳ ಬಗ್ಗೆ ಪತ್ರಕರ್ತರು ಸಭೆಯ ಗಮನಕ್ಕೆ ತಂದರು. 

 ಕಾಲೇಜು ಯುವಕರು ಕಾಲೇಜಿಗೆ ತೆರಳದೇ ಪಟ್ಟಣದಲ್ಲಿ ಸುತ್ತಾಡುತ್ತಿರುವುದನ್ನು ಗಮನಹರಿಸುವಂತೆ ಈ ಸಂದರ್ಭ ತಿಳಿಸಲಾಯಿತು. 

 ದ್ವಿಚಕ್ರ ವಾಹನದಲ್ಲಿ ಮೂವರು ಸವಾರರು ತೆರಳುತ್ತಿರುವ ಬಗ್ಗೆ ಮತ್ತು ಶಾಲಾ ಮಕ್ಕಳ ವಾಹಗಳ ದಾಖಲಾತಿ ಪರಿಶೀಲನೆ ಮಾಡುವಂತೆ ಸೂಚಿಸಲಾಯಿತು. 

 ಪಾನಮತ್ತರಾಗಿ ವಾಹನ ಚಾಲನೆ ಮಾಡುವ ಚಾಲಕರ ಬಗ್ಗೆ ಮತ್ತು ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿಯನ್ನು ಒದಗಿಸಲಾಯಿತು. 

 ಪೊನ್ನಂಪೇಟೆ ತಿರುವು ಮತ್ತು ಪಾಲಿಬೆಟ್ಟ ತಿರುವಿನಲ್ಲಿ ಬಸ್ಸ್ ನಿಲುಗಡೆಗೆ ಅವಕಾಶ ನೀಡದೇ, ಈ ಹಿಂದೆ ಸೂಚಿಸಿರುವ ಸ್ಥಳದಲ್ಲೇ ನಿಲುಗಡೆ ಮಾಡಲು ಕ್ರಮಕೈಗೊಳ್ಳಬೇಕು. ಅದರಂತೆ ಬಸ್ಸ್ ನಿಲ್ದಾಣದಲ್ಲಿ ವಿರಾಜಪೇಟೆ ಮಾರ್ಗಕ್ಕೆ ತೆರಳುವ ಬಸ್ಸ್ಗಳು ನಿಲ್ಲುವ ಸ್ಥಳವನ್ನು ಬಸ್ಸ್ ನಿಲ್ದಾಣ ಉದ್ಘಾಟನೆಯಾದ ನಂತರ ಸ್ಥಳಾಂತರ ಮಾಡಬೇಕೆಂದು ಮನವಿ ಮಾಡಲಾಯಿತು. 

 ಎಂ.ಡಿ.ಎA ಮತ್ತು ಗಾಂಜಾ ಮಾರಾಟ ಮಾಡುವವರು ಮತ್ತು ವ್ಯಸನಿಗಳು ಪಟ್ಟಣದಲ್ಲಿ ಅಧಿಕವಾಗಿದ್ದಾರೆ. ಈ ಬಗ್ಗೆ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕು. ಜೊತೆಗೆ ಪಟ್ಟಣದ ಪ್ರತಿ ಗಲ್ಲಿ ರಸ್ತೆಗಳಲ್ಲಿಯೂ ಪೋಲಿಸ್ ವಾಹನದ ಸಂಚಾರದ ಅಗತ್ಯತೆಯನ್ನು ಒದಗಿಸುವಂತೆಯೂ ಚರ್ಚಿಸಲಾಯಿತು. 

 ಟಾಫಿಕ್ ಸಮಸ್ಯೆ ಮತ್ತು ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸಲು ವಾರದಲ್ಲಿ ಎರಡು ಅಥವಾ ಮೂರು ದಿನ ಪಟ್ಟಣದ ವರ್ತಕರು ದ್ವಿಚಕ್ರ ಬಳಸುವ ಬಗ್ಗೆ ವರ್ತಕರ ಸಂಘಟನೆಯಲ್ಲಿ ಚರ್ಚಿಸುವಂತೆ ತಿಳಿಸಲಾಯಿತು. ಜೊತೆಗೆ ಗ್ಯಾರೇಜ್‌ಗಳ ಮುಂಭಾಗದ ರಸ್ತೆಗಳಲ್ಲಿ ದುರಸ್ಥಿಗೆ ಬಂದ ವಾಹನ ನಿಲುಗಡೆಗೆ ಅವಕಾಶ ನೀಡದೇ ಪಾರ್ಕಿಂಗ್ ವ್ಯವಸ್ಥೆಯನ್ನು ಸುಸ್ಥಿತಿಗೆ ತರಲು ಕ್ರಮ ಕೈಗೊಳ್ಳಬೇಕೆಂದು ಪತ್ರಕರ್ತರು ಸಲಹೆ ನೀಡಿದರು. 

 ಪತ್ರಕರ್ತರುಗಳಾದ ಜಗದೀಶ್ ಜೋಡುಬೀಟಿ,ಹೆಚ್.ಕೆ. ಜಗದೀಶ್, ಕಿಶೋರ್‌ನಾಚಪ್ಪ, ಎನ್.ಎನ್ ದಿನೇಶ್, , ವಿವಿ ಅರುಣ್‌ಕುಮಾರ್, ಸತೀಶ್ ಸಿಂಗಿ, ಆಶೋಕ್ ಹಾಗೂ ಅಪರಾಧ ವಿಭಾಗದ ಎಸ್.ಐ ವೆಂಕಟೇಶ್, ಪೊಲೀಸ್ ಸಿಬ್ಬಂಧಿಗಳು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0