ಗೋಣಿಕೊಪ್ಪಲು ಕೀರೆ ಹೊಳೆ ಒತ್ತುವರಿ ಪ್ರಕರಣ: ದಶಕಗಳು ಕಳೆದರೂ ಕ್ರಮ ಕೈಗೊಳ್ಳದ ತಾಲೂಕು ಆಡಳಿತ

ಗೋಣಿಕೊಪ್ಪಲು ಕೀರೆ  ಹೊಳೆ ಒತ್ತುವರಿ ಪ್ರಕರಣ:       ದಶಕಗಳು ಕಳೆದರೂ ಕ್ರಮ ಕೈಗೊಳ್ಳದ ತಾಲೂಕು ಆಡಳಿತ

ಗೋಣಿಕೊಪ್ಪ: ಕೊಡಗಿನಲ್ಲಿ ಬಹುತೇಕ ನದಿ ತೊರೆಗಳ ಬದಿಯಲ್ಲಿ ಅಕ್ರಮ ಕಟ್ಟಡಗಳು ನಿಯಮವನ್ನು ಪಾಲಿಸದೆ ನೆಲೆ ನಿಲ್ಲುತ್ತಿದೆ, ಹೋಂ ಸ್ಟೇ ರೆಸಾರ್ಟ್ ನಿರ್ಮಿಸಲು ಹೊಳೆ ಬದಿಯ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಲಿಖಿತವಾಗಿ ದಾಖಲಾತಿ ಸಹಿತ ದೂರು ನೀಡಿದರು ಕೂಡ ಸಂಬಂಧಿಸಿದ ಇಲಾಖೆಯವರು ಕ್ರಮ ಜರುಗಿಸದೆ ಕಡತಗಳನ್ನು ತಮ್ಮ ಬಳಿಯಲ್ಲಿ ಇರಿಸಿಕೊಂಡು ಪರೋಕ್ಷವಾಗಿ. ಒತ್ತುವರಿದಾರರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಸಂಶಯ ಎಲ್ಲರಲ್ಲೂ ಕಾಡತೊಡಗಿದೆ.

ಗೋಣಿಕೊಪ್ಪ ಕೀರೆ ಹೊಳೆ ಒತ್ತುವರಿ ಪ್ರಕರಣ ತಹಸೀಲ್ದಾರ್ ಕಚೇರಿ ಯಿಂದ ರವಾನೆ ಯಾಗದ ಕಡತದ ಲಾಭ ಪಡೆದು ಒತ್ತುವರಿದಾರರು ಮತ್ತಷ್ಟು ಹೊಳೆ ಒತ್ತುವರಿ ಮಾಡಿ ಕಟ್ಟಡಗಳನ್ನು ಇದೀಗ ನಿರ್ಮಾಣ ಮಾಡುತ್ತಿದ್ದು ಇದರಿಂದ ಜಲಾಮೂ ಲ ಮತ್ತು ಜಲ ಚರ, ಹೊಳೆ ಬದಿ ಸಸ್ಯವರ್ಗಕೆ ಅಪಾಯವಾಗುತ್ತಿದೆ. ಕೆಲವು ಒತ್ತುವರಿ ಪ್ರಕರಣಕ್ಕೆ ನ್ಯಾಯ ಲಯದ ತಡೆಯಜ್ಞೆ ಇದೆ ಈ ಕಡೆಯಾಗಿ ತೆರುವಿನ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಪ್ರಯತ್ನವನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲ ಮತ್ತು ತಡೆಯಜ್ಞೆ ಇಲ್ಲದೆ ಇರುವ ಒತ್ತುವರಿಯ ತೆರವು ಮಾಡಲು ಕೂಡ ಕ್ರಮ ಕೈ ಗೊಳ್ಳುತ್ತಿಲ್ಲ.

ಒಂದು ದಶಕಗಳ ಹಿಂದೆ ಡಾ: ಎಂ.ಆರ್ ರವಿ ರವರು ಉಪ ವಿಭಾಗಾಧಿಕಾರಿಗಳಾಗಿದ್ದ ಸಂದರ್ಭ ಈ ಬಗ್ಗೆ ಬಂದ ದೂರಿನ ಅನ್ವಯ ಸ್ವತಹ ಅವರು ಸ್ಥಳ ಪರಿಶೀಲಿಸಿ ಕ್ರಮ ಕೈಗೊಂಡು ಒಟ್ಟು 48 ಒತ್ತುವರಿದಾರರ ಮೇಲೆ ಕ್ರಮ ಕೈಗೊಂಡು ತೆರವುಗೊಳಿಸಲು ಆದೇಶ ನೀಡಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದಿನ ತಹಸೀಲ್ದಾರ್ ಆಗಿದ್ದ ಯೋಗಾನಂದ ರವರು ಈ ಬಗ್ಗೆ ಮುತ್ತುರ್ಜೆ ವಹಿಸಿ ತೆರವು ಮಾಡಲು ಪ್ರಯತ್ನ ಪಟ್ಟರು.

ಈ ಹಂತದಲ್ಲಿ ಅವರ ವರ್ಗಾವಣೆ ನಡೆದ ನಂತರ ಕಡತ ತಹಸೀಲ್ದಾರ್ ಕಚೇರಿ ಯಿಂದ ಇದುವರೆಗೂ ಕೂಡ ವಿಲೇವಾರಿಯಾಗಿಲ್ಲ. ಕಂದಾಯ ಸಚಿವರಾದ ಕೃಷ್ಣ ಬೈರೆ ಗೌಡರು ಇಂದು ಪೊನ್ನಂಪೇಟೆಗೆ ಭೇಟಿ ನೀಡುತ್ತಿದ್ದು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ದೂರುದಾರರು ನಿರೀಕ್ಷಿಸಿದ್ದಾರೆ.