ಟಿಂಬರ್ ವ್ಯಾಪಾರಿಗಳಿಗೆ ಗುಡ್ ನ್ಯೂಸ್

Jun 16, 2026 - 16:49
 0  1.5k
ಟಿಂಬರ್ ವ್ಯಾಪಾರಿಗಳಿಗೆ ಗುಡ್ ನ್ಯೂಸ್

ಸಿದ್ದಾಪುರ: ಮುಂಗಾರು ಮಳೆ ಹಿನ್ನೆಲೆಯಲ್ಲಿ ಜೂನ್ 10ರಿಂದ ಜಾರಿಗೆ ಬಂದಿದ್ದ ಭಾರಿ ವಾಹನ ಸಂಚಾರ ನಿಷೇಧ ಆದೇಶವನ್ನು ಕೊಡಗು ಜಿಲ್ಲಾಡಳಿತ ಭಾಗಶಃ ಮಾರ್ಪಡಿಸಿದ್ದು, ಟಿಂಬರ್ ವ್ಯಾಪಾರಿಗಳು ಹಾಗೂ ಲಾರಿ ಮಾಲೀಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

 ರಸ್ತೆ ಸುರಕ್ಷತೆ, ಸಾರ್ವಜನಿಕ ಆಸ್ತಿ ರಕ್ಷಣೆ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ 1963ರ ವಿಧಿ 31ರ ಅಡಿ ಜಿಲ್ಲಾಧಿಕಾರಿಗಳು ಜೂನ್ 10ರಿಂದ ಜುಲೈ 9ರವರೆಗೆ ಮರಳು, ಮರದ ದಿಮ್ಮಿ ಸಾಗಾಣಿಕೆ ಹಾಗೂ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದರು. ಇದರಿಂದ ಜಿಲ್ಲೆಯ ಟಿಂಬರ್ ವ್ಯಾಪಾರ, ಕಟ್ಟಡ ಸಾಮಗ್ರಿ ಸಾಗಾಣಿಕೆ ಸ್ಥಗಿತಗೊಂಡು ವ್ಯಾಪಾರಿಗಳಿಗೆ ನಷ್ಟ ಉಂಟಾಗಿತ್ತು.

ಅಸೋಸಿಯೇಷನ್ ಮನವಿಗೆ ಸ್ಪಂದನೆ

ಈ ಹಿನ್ನೆಲೆಯಲ್ಲಿ ಕೊಡಗು ಟಿಂಬರ್ ಟ್ರೇಡಿಂಗ್ ಅಸೋಸಿಯೇಷನ್ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಪ್ರಸ್ತುತ ಹವಾಮಾನ ಪರಿಸ್ಥಿತಿ ಮತ್ತು ವ್ಯಾಪಾರಿಗಳ ಸಂಕಷ್ಟವನ್ನು ವಿವರಿಸಿತ್ತು. ಮನವಿ ಪರಿಶೀಲಿಸಿದ ಜಿಲ್ಲಾಡಳಿತ ಆದೇಶಕ್ಕೆ ಭಾಗಶಃ ತಿದ್ದುಪಡಿ ಮಾಡಿದೆ.

ಜೂನ್ 26ರಿಂದ ಮತ್ತೆ ನಿಷೇಧ: ಜೂನ್ 26ರಿಂದ ಜುಲೈ 9ರವರೆಗೆ ಮೂಲ ಆದೇಶದಂತೆ ಮರಳು, ಮರದ ದಿಮ್ಮಿ ಸಾಗಾಣಿಕೆ ಹಾಗೂ ಭಾರಿ ವಾಹನಗಳ ಸಂಚಾರ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗಲಿದೆ. ಉಳಿದಂತೆ ಮೂಲ ಆದೇಶದ ಇತರ ನಿಯಮಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0