ಗೌಡ ಕುಟುಂಬವಾರು ಕ್ರಿಕೆಟ್; ಉಳುವಾರನ, ಕುಡೆಕಲ್ಲು, ಪರ್ಲಕೋಟಿ, ಸಣ್ಣಜನ, ಸೆಮಿಫೈನಲ್ ಗೆ ಲಗ್ಗೆ

Apr 25, 2026 - 10:47
Apr 25, 2026 - 10:48
 0  132
ಗೌಡ ಕುಟುಂಬವಾರು ಕ್ರಿಕೆಟ್; ಉಳುವಾರನ, ಕುಡೆಕಲ್ಲು, ಪರ್ಲಕೋಟಿ, ಸಣ್ಣಜನ, ಸೆಮಿಫೈನಲ್ ಗೆ  ಲಗ್ಗೆ

ಮಡಿಕೇರಿ: ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಮರಗೋಡುವಿನಲ್ಲಿ ನಡೆಯುತ್ತಿರುವ ಕುಟುಂಬ ಕಲರವ ಕ್ರಿಕೆಟ್ ಟೂರ್ನಿಯಲ್ಲಿ ಉಳುವಾರನ, ಕುಡೆಕಲ್ಲು, ಪರ್ಲಕೋಟಿ ಹಾಗೂ ಸಣ್ಣಜನ ತಂಡಗಳು ಸೆಮಿಫೈನಲ್ ಗೆ ಪ್ರವೇಶ ಪಡೆದುಕೊಂಡಿವೆ.

ಕೊಂಬಾಂಡ ಹಾಗೂ ಉಳುವಾರನ ನಡುವಿನ ಪಂದ್ಯದಲ್ಲಿ ಉಳುವಾರನ ಗೆಲುವು ಪಡೆಯಿತು. 10 ಓವರ್‌ಗಳ ಪಂದ್ಯದಲ್ಲಿ ಕೊಂಬಾಂಡ 7 ವಿಕೆಟ್ ನಷ್ಟಕ್ಕೆ 52 ರನ್ ಬಾರಿಸಿತು. ಗುರಿ ಬೆನ್ನತ್ತಿದ ಉಳುವಾರನ 3.2 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 55 ರನ್ ಕಲೆ ಹಾಕಿ ಸೆಮಿಫೈನಲ್‌ಗೆ ಕಾಲಿಟ್ಟಿತು.

ಇಳಂದಿಲ ತಂಡವನ್ನು ಮಣಿಸಿ ಕುಡೆಕಲ್ಲು ಉಪಾಂತ್ಯಕ್ಕೆ ಪ್ರವೇಶಿಸಿತು. ಮೊದಲು ಬ್ಯಾಟ್ ಮಾಡಿದ ಕುಡೆಕಲ್ಲು 1 ವಿಕೆಟ್ ನಷ್ಟಕ್ಕೆ 130 ರನ್ ಪೇರಿಸಿತು.

ಇಳಂದಿಲ 8.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 82 ರನ್ ಮಾತ್ರ ಗಳಿಸಲು ಶಕ್ತವಾಗಿ ಟೂರ್ನಿಯಿಂದ ನಿರ್ಗಮಿಸಿತು.

ಅಮೆಮನೆ ತಂಡವನ್ನು ಮಣಿಸಿ ಪರ್ಲಕೋಟಿ ಸೆಮಿಸ್ ಪ್ರವೇಶಿಸಿತು. ಮೊದಲು ಬ್ಯಾಟ್ ಮಾಡಿದ ಪೆರ್ಲಕೋಟಿ 6 ವಿಕೆಟ್ ನಷ್ಟಕ್ಕೆ 73 ರನ್ ಬಾರಿಸಿತು. ಅಮೆಮನೆ 7 ವಿಕೆಟ್ ಕಳೆದುಕೊಂಡು 41 ರನ್ ಮಾತ್ರ ಗಳಿಸಿ ಸೋಲಿಗೆ ಶರಣಾಯಿತು. ತಳೂರು ವಿರುದ್ಧ ಸಣ್ಣಜನ ಗೆಲುವು ಸಾಧಿಸಿತು. ಸಣ್ಣಜನ 10 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತು. ತಳೂರು 8 ವಿಕೆಟ್ ನಷ್ಟಕ್ಕೆ 74 ರನ್ ಬಾರಿಸಿ ಸೋಲು ಕಂಡಿತು.

ನಾಳಿನ ಸೆಮಿಫೈನಲ್ ಪಂದ್ಯ;

ಉಳುವಾರನ;ಕುಡೆಕಲ್ಲು

ಪರ್ಲಕೋಟಿ;ಸಣ್ಣಜನ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0