ಹೆಗ್ಗಳ ಎಸ್.ಎನ್.ಡಿ.ಪಿ ವಯಿತಿಂದ ನಾರಾಯಣ ಗುರು ಜಯಂತಿ
ಸಿದ್ದಾಪುರ: ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ (ಎಸ್.ಎನ್.ಡಿ.ಪಿ) ಹೆಗ್ಗಳ ಶಾಖೆಯ ವತಿಯಿಂದ ಶ್ರೀ ನಾರಾಯಣ ಗುರುಗಳ ಜಯಂತಿಯ ಆಚರಣೆ ಭಾನುವಾರ ಅದ್ಧೂರಿಯಿಂದ ನಡೆಯಿತು.
ಕಾರ್ಯಕ್ರಮವನ್ನು ಎಸ್.ಎನ್.ಡಿ.ಪಿ ಕೊಡಗು ಯೂನಿಯನ್ ಅಧ್ಯಕ್ಷರಾದ ವಿ.ಕೆ ಲೊಕೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಂಘಟನೆಯಿಂದ ಶಕ್ತರಾಗಲು ಹಾಗೂ ವಿಧ್ಯೆಯಿಂದ ಸ್ವತಂತ್ರ್ಯರಾಗುವಂತೆ ಗುರುಗಳು ಕರೆ ನೀಡಿದ್ದರು. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಬೇಕು.
ಗುರುಗಳ ತತ್ವ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸುವಂತೆ ಸಲಹೆ ನೀಡಿದರು. ಜಿಲ್ಲೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಎಸ್.ಎನ್.ಡಿ.ಪಿ ಶಾಖೆಗಳಿದ್ದು, ಸಂಘಟನೆಯು ಜಿಲ್ಲಾಧ್ಯಂತ ಉತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದರು.
ಜಿ.ಪಂ ಮಾಜಿ ಸದಸ್ಯರಾದ ಮಹೇಶ್ ಗಣಪತಿ ಮಾತನಾಡಿ, ಕೇರಳದ ಜಾತಿ ವ್ಯವಸ್ಥೆಯ ವಿರುದ್ಧ ನಿಂತು, ಕೆಳರ‍್ಗದ ಜನರಿಗೆ ದೇವಾಲಯ ನರ‍್ಮಿಸಿ, ಪೂಜೆಗೆ ಅನುವು ಮಾಡಿಕೊಟ್ಟಿದ್ದರು. ಗುರುಗಳ ಗುರುಗಳ ಆದರ್ಶ ಅನುಕರಣೀಯ ಎಂದರು. ಕರ‍್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎನ್.ಡಿ.ಪಿ ಹೆಗ್ಗಳ ಶಾಖೆಯ ಅಧ್ಯಕ್ಷರಾದ ರಮೇಶ್ ವಹಿಸಿದ್ದರು.
ಈ ಸಂದರ್ಭ ಎಸ್.ಎನ್.ಡಿ.ಪಿ ಯೂನಿಯನ್ ಕೌನ್ಸಿಲರ್ ಪಾಪಾಯ್ಯ ಹಾಜರಿದ್ದರು. ಕಾರ‍್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯರ‍್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ, ಪುರುಷರಿಗೆ ಹಗ್ಗಜಗ್ಗಾಟ, ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.