ಜೂ.30ರ ಜನಜಾಗೃತಿ ಸಭೆಗೆ ಹಿಂದೂ ಜಾಗರಣ ವೇದಿಕೆ ಬೆಂಬಲ
admincoorgdaily

ಮಡಿಕೇರಿ: ಕುಶಾಲನಗರ ಹಿಂದೂ ಸುರಕ್ಷಾ ಸಮಿತಿ ನೇತೃತ್ವದಲ್ಲಿ ಲವ್ ಜಿಹಾದ್ ಮತಾಂತರದ ವಿರುದ್ಧ ನಡೆಯುವ ಬೃಹತ್ ಜನಜಾಗೃತಿ ಜನಾಂದೋಲನ ಸಭೆಗೆ ಹಿಂದೂ ಜಾಗರಣ ವೇದಿಕೆ ಬೆಂಬಲ ನೀಡಲಿದೆ ಎಂದು ವೇದಿಕೆಯ ಜಿಲ್ಲಾ ಸಂಯೋಜಕ್ ಬೋಜೆಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಅಸಮಾಧಾನದ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸಬೇಕು. ಕುಶಾಲನಗರದಲ್ಲಿ ತಾಯಿ-ಮಗುವಿನ ಪ್ರಕರಣ ಸೇರಿದಂತೆ ಕೆಲವು ಘಟನೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ನಿಸರ್ಗಧಾಮದ ವಾಣಿಜ್ಯ ಚಟುವಟಿಕೆಗಳಲ್ಲಿ ಕೆಲಸ ಮಾಡುವ ಯುವತಿಯರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಜಿಲ್ಲಾ ಸಂಯೋಜಕ ಭೋಜೆಗೌಡ, ಸುಮಾರು ೧೨ ಮತಾಂತರ ಪ್ರಕರಣಗಳ ಶಂಕೆ ಇದೆ. ಈ ಹಿನ್ನೆಲೆ ಜೂ.೩೦ರಂದು ಕುಶಾಲನಗರದಲ್ಲಿ ಜನಜಾಗೃತಿ ಸಭೆ ನಡೆಯಲಿದೆ. ಅಂದು ಬೆಳಗ್ಗೆ ನಿಸರ್ಗಧಾಮದಿಂದ ಕುಶಾಲನಗರದವರೆಗೆ ಮರವಣಿಗೆ ಸಾಗಿ, ಜನಜಾಗೃತಿ ಸಭೆ ನಡೆದಲಾಗುವುದು. ಅಂದು ಹೆಚ್ಚಿನ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಬಾಂಧವರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಅಜಿತ್ ಕುಕ್ಕೇರ, ಸುನಿಲ್, ಅಪ್ಪುರೈ, ಭುವನ್‌ಗೌಡ, ತಿಮ್ಮಯ್ಯ ಇದ್ದರು.