ಜಿಲ್ಲೆಯಲ್ಲಿನ ಅಕ್ರಮ ಕಸಾಯಿಖಾನೆಗಳನ್ನು ಶಾಶ್ವತವಾಗಿ ಮುಚ್ಚಲು ಹಿಂದೂ ಪರಿಷದ್ ಆಗ್ರಹ
admincoorgdaily

ಮಡಿಕೇರಿ: ಬಕ್ರೀದ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಅಕ್ರಮ ಕಸಾಯಿಖಾನೆಗಳನ್ನು ಶಾಶ್ವತವಾಗಿ ಮುಚ್ಚಲು ಮತ್ತು ಜಾನುವಾರು ಹತ್ಯೆ ನಡೆದ ಆಸ್ತಿಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಲು ವಿಶ್ವ ಹಿಂದೂ ಪರಿಷದ್ ಆಗ್ರಹಿಸಿದೆ.
ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಮಾತನಾಡಿ, ಅಪರಾಧಿಗಳಿಗೆ ೭ ವರ್ಷ ಜೈಲು, ಪ್ರತಿ ಜಾನುವಾರಿಗೆ ರೂ.೧ ಲಕ್ಷ ದಂಡ ವಿಧಿಸಬೇಕು. ಅನಧಿಕೃತ ಸ್ಥಳದಲ್ಲಿ ವಧೆಗೆ ಸಿದ್ಧಪಡಿಸಿದ ಜಾನುವಾರುಗಳನ್ನು ಗೋಶಾಲೆಗೆ ವರ್ಗಾಯಿಸಬೇಕು. ಬೀಟ್ ಪೊಲೀಸರ ಮೂಲಕ ವ್ಯಾಪ್ತಿಯ ಅಕ್ರಮ ಕಸಾಯಿಖಾನೆಗಳನ್ನು ಗುರುತಿಸಿ ಶಾಶ್ವತವಾಗಿ ಮುಚ್ಚಬೇಕು. ಪ್ರತಿಯೊಂದು ಬೀಫ್ ಸ್ಟಾಲ್‌ನಲ್ಲಿ ಮಾರಾಟವಾಗುವ ಮಾಂಸದ ಮೂಲದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಪುದಿಯೊಕ್ಕಡ ರಮೇಶ್, ಬಜರಂಗದಳದ ಪ್ರಮುಖರಾದ ವಿನಯ್ ಕುಮಾರ್, ದುರ್ಗೆಶ್, ಮುಕುಂದ್ ಉಪಸ್ಥಿರಿದ್ದರು.