ಕೊಡಗು ವಿ.ವಿ ಕುಲಪತಿಗೆ "ಆನರ್ "ಆಫ್ ಅಶೋಕ ಪ್ರಶಸ್ತಿ 2025"
ಮಡಿಕೇರಿ: ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರರವರಿಗೆ ನವದೆಹಲಿಯ ಇಂಡಿಯಾ ಹ್ಯಾಬಿಟೆಟ್ ಸೆಂಟರ್‌ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಚಾರ್ಲ್ಸ್ ವಾಲ್ಟರ್ ಕೌನ್ಸಿಲ್ ಫಾರ್ ಇನೋವೇಶನ್ ಅಂಡ್ ರೀಸರ್ಚ್ ಮತ್ತು ಅಸೋಸಿಯೇಷನ್ ಆಫ್ ಇಂಡಿಯನ್ ಬ್ಯೂರೋಕ್ಯಾಟ್ ಅವರ ಸಂಯೋಗದೊಂದಿಗೆ ಪ್ರತಿಷ್ಠಿತ "ಆನರ್ ಆಫ್ ಅಶೋಕ ಪ್ರಶಸ್ತಿ 2025" ನೀಡಿ ಗೌರವಿಸಲಾಗಿದೆ.
ಆನರ್ ಆಫ್ ಅಶೋಕ ಪ್ರಶಸ್ತಿಯ ಹಿನ್ನೆಲೆ:
ಈ ಪ್ರಶಸ್ತಿಯನ್ನು ನ್ಯಾಯಾಂಗ, ಪೊಲೀಸ್, ಸಾರ್ವಜನಿಕ-ಶೈಕ್ಷಣಿಕ ಆಡಳಿತ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಶ್ಲಾಘನೀಯ ಶ್ರೇಷ್ಠತೆಯನ್ನು ಪ್ರದರ್ಶಿಸಿದ ನೈಪುಣ್ಯ ಅಧಿಕಾರಿಗಳು, ಸೈನಿಕರು, ಆಡಳಿತಗಾರರು ಮತ್ತು ಶಿಕ್ಷಣ ತಜ್ಞರಿಗೆ ಮೀಸಲಾಗಿರುವ ಪ್ರತಿಷ್ಠಿತ ಮನ್ನಣೆಯಾಗಿದೆ. ತನ್ನ ನ್ಯಾಯಯುತ ಆಡಳಿತ, ಆಡಳಿತದ ತೇಜಸ್ಸು ಮತ್ತು ರಾಷ್ಟ್ರದ ಬಗೆಗಿನ ಅಚಲ ಬದ್ಧತೆಗೆ ಹೆಸರುವಾಸಿಯಾದ ದಾರ್ಶನಿಕ ಆಡಳಿತಗಾರ ಅಶೋಕ ಚಕ್ರವರ್ತಿಯಿಂದ ಸ್ಫೂರ್ತಿ ಪಡೆದ ಈ ಪ್ರಶಸ್ತಿಯು ನ್ಯಾಯ, ಸಮಗ್ರತೆ ಮತ್ತು ಸಾರ್ವಜನಿಕ ಸೇವೆಯ ತತ್ವಗಳನ್ನು ಎತ್ತಿಹಿಡಿಯುವವರನ್ನು ಗೌರವಿಸುತ್ತದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದಕ್ಷ ಪೋಲೀಸ್ ಅಧಿಕಾರಿಗಳಿಗೆ, ಮಹತ್ವದ ತೀರ್ಪುಗಳನ್ನು ನೀಡುವ ನ್ಯಾಯಾಂಗ ಕ್ಷೇತ್ರದ ಮಹನೀಯರಿಗೆ, ಸಮಾಜದಲ್ಲಿ ಪರಿವರ್ತನಾ ನೀತಿಗಳನ್ನು ಮುನ್ನಡೆಸುವ ನಾಗರಿಕ ಸೇವಕರು, ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಆಡಳಿತ ನಾಯಕರು, ಸುರಕ್ಷಿತ ಗಡಿಗಳನ್ನು ಕಾಪಾಡುವ ಸೇನೆ / ನೌಕಾಪಡೆ / ವಾಯುಪಡೆಯ ಸಿಬ್ಬಂದಿಗಳು, ಯುವಜನರಿಗೆ ಶಿಕ್ಷಣ ನೀಡುವ ಶೈಕ್ಷಣಿಕ ಆಡಳಿತಗಾರರು ಹೀಗೆ ಈ ಗೌರವಾನ್ವಿತ ಅಧಿಕಾರಿಗಳನ್ನು ಗುರುತಿಸುವ ಮೂಲಕ, ಗೌರವಾನ್ವಿತ ಅಶೋಕ ಪ್ರಶಸ್ತಿಯು ಅವರ ಸೇವೆಗೆ ಗೌರವ ಸಲ್ಲಿಸುತ್ತದೆ. ಮಾತ್ರವಲ್ಲದೆ ನೈತಿಕ ನಾಯಕತ್ವ, ಉತ್ತಮ ಆಡಳಿತ ಮತ್ತು ನ್ಯಾಯದ ಅಚಲ ಅನ್ವೇಷಣೆಯ ಮೌಲ್ಯಗಳನ್ನು ಸಧೃಢಗೊಳಿಸುತ್ತದೆ. ಜೊತೆಗೆ ಭಾರತದ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತವಾಗುತ್ತದೆ.
ಪ್ರತಿಷ್ಠಿತ ಪ್ರಶಸ್ತಿಗೆ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರಿಗೆ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಕ್ಯಾಬಿನೆಟ್ ಸಚಿವರು, ಮಾಜಿ ರಾಜ್ಯಪಾಲರು, ಹಿಮಾಂಚಲ್ ಪ್ರದೇಶ, ಮಾಜಿ ರಾಜ್ಯಪಾಲರು, ರಾಜಸ್ಥಾನ ಘನತೆವೆತ್ತ ಶ್ರೀ ಕಲ್ರಾಜ್ ಮಿಶ್ರಾ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಜೇಂದರ್ ಜೈನ್ ಅವರು ವಹಿಸಿದ್ದರು. ಲೆಫ್ಟಿನೆಂಟ್ ಜನರಲ್ ಎಸ್ ಕೆ ಸೈನಿ, ಭಾರತೀಯ ಸೇನಾ ಸಿಬ್ಬಂದಿ ಮಾಜಿ ಉಪಾಧ್ಯಕ್ಷ ಲೆಫ್ಟಿನೆಂಟ್ ಜನರಲ್ ಎಸ್ ಕೆ ಸೈನಿ, AVSM VM VSM ಏರ್ ಮಾರ್ಷಲ್ ಜಿ ಎಸ್ ಬೇಡಿ, ಲೆಫ್ಟಿನೆಂಟ್ ಜನರಲ್ ಕರಣ್ಬೀರ್ ಸಿಂಗ್ ಬ್ರಾರ್, PVSM, AVSM, ಮಾಜಿ ಸೇನಾ ಸಿಬ್ಬಂದಿ ಎರಡು ಬಾರಿ ಪ್ರಶಂಸೆ ಮತ್ತು ಮಾಜಿ GOC-in-C ಈಸ್ಟರ್ನ್ ಕಮಾಂಡ್ ಎರಡು ಬಾರಿ ಪ್ರಶಂಸೆ ಗೌರವಾನ್ವಿತ ಕಾರ್ಯತಂತ್ರದ ಸಲಹೆಗಾರ - IITM PRAVARTAK ಇದ್ದರು. ಚಾರ್ಲ್ಸ್ ವಾಲ್ಟರ್ಸ್ ಕೌನ್ಸಿಲ್ ಫಾರ್ ಇನ್ನೋವೇಶನ್ ಅಂಡ್ ರೀಸರ್ಚ್‌ನ ಸಂಚಾಲಕರು ಮತ್ತು ಅಶೋಕ ಪ್ರಶಸ್ತಿಯ ಸ್ಥಾಪಕ ನಿರ್ದೇಶಕರು ಆದ ಶ್ರೀ. ಅಭಿಷೇಕ್ ಪಾಂಡೆ ಅವರು ಕಾರ್ಯಕ್ರಮ ಸಂಯೋಜಿಸಿದ್ದರು.