ಹುದುಗೂರು ಮತ್ತು ಹೊಸಹಳ್ಳಿ ಸಸ್ಯಕ್ಷೇತ್ರ; ಗಿಡ ವಿತರಣೆ

Jun 11, 2026 - 17:31
 0  313
ಹುದುಗೂರು ಮತ್ತು ಹೊಸಹಳ್ಳಿ ಸಸ್ಯಕ್ಷೇತ್ರ; ಗಿಡ ವಿತರಣೆ

ಮಡಿಕೇರಿ :-ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದ ಹುದುಗೂರು ಮತ್ತು ಹೊಸಹಳ್ಳಿ ಸಸ್ಯಕ್ಷೇತ್ರದಲ್ಲಿ 2026-27ನೇ ಸಾಲಿನ ಮಳೆಗಾಲದಲ್ಲಿ ನೆಡಲು ವಿವಿಧ ಹಣ್ಣಿನ, ಔಷಧೀಯ ಹಾಗೂ ಕಾಡು ಜಾತಿಯ ಸಸಿಗಳನ್ನು ಬೆಳೆಸಲಾಗಿದ್ದು, ಮಹಾಗನಿ, ಹೆಬ್ಬೇವು, ಬಿದಿರು, ನೇರಳೆ, ಸಿಲ್ವರ್, ರಕ್ತಚಂದನ, ಲಾವಂಚ, ತೇಗ ಮುಂತಾದ ಗಿಡಗಳಿದ್ದು, 6*9 ಅಳತೆಯ ಗಿಡ ಒಂದಕ್ಕೆ ರೂ.3 ರಂತೆ ಹಾಗೂ 8*12 ಅಳತೆಯ ಗಿಡ ಒಂದಕ್ಕೆ ರೂ.6 ರಂತೆ ವಿವಿಧ ಅಳತೆಯ ಗಿಡ ವಿತರಣಾ ಕಾರ್ಯವನ್ನು ಜೂನ್, 15 ರಿಂದ ಪ್ರಾರಂಭಿಸಲಾಗುತ್ತದೆ.  

ಹೆಚ್ಚಿನ ಮಾಹಿತಿಗೆ ಉಪ ವಲಯ ಅರಣ್ಯಾಧಿಕಾರಿ(ಗಣೇಶ ಎಂ.)9164303717, ಉಪ ವಲಯ ಅರಣ್ಯಾಧಿಕಾರಿ(ಹರೀಶ್ ಕುಮಾರ ಎನ್.ಬಿ) 9449186823, ಗಸ್ತು ಅರಣ್ಯ ಪಾಲಕರು(ಸೋಮಶೇಖರ ನೀಲಕಂಠ ಉಪ್ಪಾರ( 7026469099 ಹಾಗೂ ವಲಯ ಕಚೇರಿಯ ದೂ.ಸಂ. 08276-242018 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಅವರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0